
ನ್ಯಾಮತಿ: ಚುಟುಕು ಸಾಹಿತ್ಯ ರಚಿಸುವವರು ಸಮಾಜದ ಅಂಕು ಡೊಂಕುಗಳನ್ನು ಕುಟುಕುವ ರೀತಿಯಲ್ಲಿರಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಿಗಿ ಸಲಹೆ ನೀಡಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಭಾನುವಾರ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಚುಟುಕು ಸಾಹಿತ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಚುಟುಕು ಸಾಹಿತ್ಯ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಗಮನಹರಿಸಲಾಗುವುದು, ಈ ನಿಟ್ಟಿನಲ್ಲಿ ಕವಿಗಳ ಮತ್ತು ಸಾರ್ವಜನಿಕರ ಸಲಹೆ ಸಹಕಾರ ಬೇಕಾಗುತ್ತದೆ ಎಂದು ಮನವಿ ಮಾಡಿದರು.
ಹೊನ್ನಾಳಿ ತಾಲ್ಲೂಕಿನ ಹಿರಿಯ ಸಾಹಿತಿ ಕೊಟ್ರೇಶ ನಾ ಉತ್ತಂಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವನಗಳನ್ನು ರಚಿಸಬಹುದು ಆದರೆ ಚುಟುಕುಗಳನ್ನು ರಚಿಸುವುದು ಬಹಳ ಕಷ್ಟ, ಇದಕ್ಕಾಗಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಬೇಕಾಗುತ್ತದೆ ಎಂದರು.
ಚುಟುಕು ಸಾಹಿತ್ಯ ಕುರಿತು ಹಿರಿಯ ಸಾಹಿತಿ ತವನಿಧಿ ಓಂಕಾರಯ್ಯ, ದಾವಣಗೆರೆ ತಾಲ್ಲೂಕು ಚುಟುಕುಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ, ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಯೋಗಿಶ ಪಾಟೀಲ್ ಉಪಯುಕ್ತ ಮಾಹಿತಿ ನೀಡಿದರು.
ನೂತನ ಅಧ್ಯಕ್ಷ ಎಂ.ಜಿ.ಕವಿರಾಜ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ತೆಲಗಿ ಅವರು ಸೇವಾದೀಕ್ಷೆ ನೀಡಿ ಪರಿಷತ್ತಿನ ಧ್ವಜವನ್ನು ಹಸ್ತಾಂತರ ಮಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ನಾಗರಾಜಪ್ಪ ಅರ್ಕಾಚಾರ್, ಉಪಾಧ್ಯಕ್ಷ ಜಿ.ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಬಿ.ರವೀಂದ್ರಚಾರ್, ಸಹಕಾರ್ಯದರ್ಶಿ ಈ ಸುಮಲತಾ, ಕೋಶಾಧ್ಯಕ್ಷ ಸೊಂಡೂರು ಮಹೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಭಾಗ್ಯಲಕ್ಷ್ಮಿ, ನಿರ್ದೇಶಕರಾದ ಟಿ.ಆರ್.ಕುಬೇರಪ್ಪ, ಸುಭಾಸ್ಚಚಂದ್ರರೆಡ್ಡಿ,ಎ.ಹಂಪಣ್ಣ, ಬಿ.ಜಿ.ಚೈತ್ರಾ, ಎಂ.ಎಸ್.ಜಗದೀಶ, ಸಿ.ಆರ್.ಶ್ವೇತಾ, ಜಿ.ಷಡಾಕ್ಷರಿ, ಎಸ್.ಪಾಲಾಕ್ಷಪ್ಪ, ಪಿಡಿಒ ಎಂ.ಜಯಪ್ಪ, ಬಿ.ಆರ್. ಉಷಾ, ಕದಳಿ ಅಧ್ಯಕ್ಷೆ ಅಂಬಿಕಾ ಬಿದರಕಟ್ಟೆ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಬಿ.ಶಿವಯೋಗಿ, ಚಂದನ್ ಜಂಗ್ಲೀ ಉಪಸ್ಥಿತರಿದ್ದರು.
ವಿವಿಧ ಕವಿಗಳು ತಮ್ಮ ಚುಟುಕು ಕವನಗಳನ್ನು ವಾಚಿಸುವ ಮೂಲಕ ಸಭೆಯನ್ನು ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.