ADVERTISEMENT

ಪಂಚಮುಖಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ: ಭಕ್ತರ ಸಡಗರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:34 IST
Last Updated 27 ಫೆಬ್ರುವರಿ 2026, 6:34 IST
<div class="paragraphs"><p>ಹರಿಹರದ ರಾಘವೇಂದ್ರಸ್ವಾಮಿ ಮಠದ ಆವರಣದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೂತನ ವಿಗ್ರಹದ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.</p></div>

ಹರಿಹರದ ರಾಘವೇಂದ್ರಸ್ವಾಮಿ ಮಠದ ಆವರಣದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೂತನ ವಿಗ್ರಹದ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

   

ಹರಿಹರ: ನಗರದ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿರುವ ಪಂಚಮುಖಿ ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪಂಚಮುಖಿ ಅಂಜನೇಯ ಸ್ವಾಮಿಯ ನೂತನ ವಿಗ್ರಹದ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು.

ಮಂದರ್ತಿ ದೇವಸ್ಥಾನದ ಪ್ರಧಾನ ಆರ್ಚಕ ಶ್ರೀಪತಿ ಅಡಿಗರವರ ನೇತೃತ್ವದಲ್ಲಿ ಪಂಚಮುಖಿ ಅಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಫೆ.25ರ ಬೆಳಿಗ್ಗೆ 8 ರಿಂದ ಪ್ರತಿಷ್ಠಾವಿಧಿ, ಜೀವ ಕುಂಭಾಭಿಷೇಕ, ತತ್ವಕಲಶ ಸ್ಥಾಪನೆ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮದ ನಂತರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜನೆ ನೆರೆವೇರಿಸಲಾಯಿತು.

ADVERTISEMENT

ಫೆ.26ರ ಬೆಳಿಗ್ಗೆ 9.30 ರಿಂದ ಬ್ರಹ್ಮ ಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾ ಹೋಮ, 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ 5 ರಿಂದ ಆಶ್ಲೇಷಾ ಬಲಿಪೂಜಾ ರಂಗಪೂಜಾ ಕಾರ್ಯಕ್ರಮ ನಡೆಸಲಾಯಿತು. ನೂರಾರು ಭಕ್ತರು ಸಡಗರ, ಸಂಭ್ರಮದಿAದ ಭಾಗವಹಿಸಿದ್ದರು.

ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡ, ಎಸ್.ಎಂ.ವೀರೇಶ್, ಬಾಪೂಜಿ ವಿದ್ಯಾಸಂಸ್ಥೆ ನಿದೇಶಕರು ಸಂಪಣ್ಣ ಮುತಾಲಿಕ್, ಉದ್ಯಮಿ ಎಚ್.ಎನ್.ಬಸವರಾಜ್, ರಾಮಪ್ರಸಾದ್ ಕುಲಕರ್ಣಿ, ವೈದ್ಯ, ಪ್ರವೀಣ್ ಹೆಗಡೆ,ಎ.ಬಿ.ಎಂ.ಮAಜುನಾಥ್, ಎ.ಬಿ.ಎಂ.ವಿಶ್ವನಾಥ್, ವಿಜಯ, ಡಿ.ಹೇಮಂತರಾಜ್, ಪ್ರಕಾಶ್ ಕೋಳೂರು, ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಸಮಿತಿ ಅಧ್ಯಕ್ಷ ಎ.ಬಿ.ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಉಪಾದ್ಯಕ್ಷ ಬಾಬಣ್ಣ ಶ್ರೇಷ್ಟಿ, ಖಜಾಂಚಿ ರಂಗನಾಥ್ ಎಸ್., ಶಿವಪ್ರಕಾಶ ಶಾಸ್ತಿç, ಮಂಜುನಾಥ ಪರಿಮಳ, ಪೈಸಾ ನಾಗರಾಜ್, ಅರ್ಚಕರಾದ ವರಹಾಚಾರ್, ಪವನ್ ಆಚಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.