ADVERTISEMENT

ತಬ್ಲೀಗ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪ್ರಧಾನಿಗೆ ಪತ್ರ: ಎಂ.ಪಿ. ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 15:43 IST
Last Updated 8 ಏಪ್ರಿಲ್ 2020, 15:43 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ತಬ್ಲೀಗ್ ಜಮಾತ್ ಸಂಘಟನೆ ದೇಶಕ್ಕೆ ಮಾರಕವಾಗಿದ್ದು, ಅದನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ‘ನಾವು ಯಾರೂ ರಾಜಕಾರಣ ಮಾಡುವುದಿಲ್ಲ. ನಮಗೆ ಜಾತಿ, ಧರ್ಮ ಮುಖ್ಯವಲ್ಲ. ದೇಶ ಮೊದಲು ಎಂಬುದನ್ನು ಸಂಘಟನೆ ಕಲಿಸಿದೆ. ದೇಶ ಉಳಿದರೆ ಎಲ್ಲರೂ ಉಳಿಯುತ್ತಾರೆ. ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರಲ್ಲ, ಅವರನ್ನು ಉಚ್ಚಾಟನೆ ಮಾಡಿ’ ಎಂದು ಆಗ್ರಹಿಸಿದರು.

‘ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ರಕ್ಷಣೆ ಮಾಡಲುಹೋದ ಪೊಲೀಸರ ಮೇಲೆ ಲಾಕ್‌ಡೌನ್‌ಗೆ ಸಹಕಾರ ಕೊಟ್ಟಿದ್ದೀರಿ ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ವೈದ್ಯರು, ನರ್ಸ್‌ಗಳ ಮೇಲೆ ಉಗುಳಿದವರಿಗೆ, ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸಿದವರಿಗೆ ಅವರಿಗೆ ಏನು ಹೇಳುತ್ತೀರಿ? ದೌರ್ಜನ್ಯ ನಡೆಸುವಾಗ ನಿಮ್ಮ ಮನಸ್ಸಿಗೆ ನೋವಾಗಲಿಲ್ಲವೇ, ನಾನು ಹೇಳಿಕೆ ಕೊಟ್ಟಾಗ ನಿಮಗೆ ಆಘಾತವಾಯಿತಾ, ಇದು ಯಾವ ನ್ಯಾಯ ಸ್ವಾಮಿ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.