
ಜಗಳೂರು: ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರ ಪಾಲಿನ ಜೀವನಾಧಾರ ಆಗಿರುವ ಮಹಾತ್ಮ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದು ಅಮಾನವೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ ಭಾನುವಾರ ಗ್ರಾಮಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಅಂಗನವಾಡಿ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿ ಕಂಡಂತಹ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿ ಕೆಲಸಗಳನ್ನು ಅನುಷ್ಠಾನಗೊಡುವ ತುರ್ತು ಇದೆ.
ಅಸಗೋಡು ಗ್ರಾಮದ ಅಭಿವೃದ್ದಿಗೆ ಹಲವರು ಸಹಕರಿಸಿದ್ದಾರೆ. ಕ್ಷೇತ್ರದ ಜನರು ತಮ್ಮಸಮಸ್ಯೆಗಳನ್ನು ಹೊತ್ತು ದಾವಣಗೆರೆ ಇತರೆ ಕಡೆ ನೆಲೆಸಿದ್ದ ಶಾಸಕರನ್ನು ಹುಡುಕಿಕೊಂಡು ಹೋಗಬೇಕಿತ್ತು. ಆದರೆ ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಸ್ಥಳೀಯವಾಗಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ರವರೆಗೆ ಜನರ ಕೈಗೆ ಸಿಗುತ್ತಾರೆ. ಇದು ತಮ್ಮಲ್ಲೆರ ಸೌಭಾಗ್ಯ ಎಂದು ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ ಸಿಇಓ ಗಿತ್ತೆಮಾಧವ ವಿಠ್ಠಲ್ ರಾವ್, ಬೆಳಗಿನ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಆಗಮಿಸಿದ ವೇಳೆ ದೊಡ್ಡ ಗ್ರಾಮ ಅಸಗೋಡು ಗ್ರಾ.ಪಂ. ಕಟ್ಟಡವಿಲ್ಲದಿರುವುದನ್ನು ಕಂಡು ಬೇಸರ ತಂದಿತು. ಅಧಿಕಾರಿಗಳು, ಶಾಸಕರೊಂದಿಗೆ ಚರ್ಚಿಸಿದ ಫಲವಾಗಿ 1ಕೋಟಿ 20 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.
ಜಿಲ್ಲೆಯಾದ್ಯಂತ ಇದುವರೆಗೆ 120 ಗ್ರಾ. ಪಂ ವ್ಯಾಪ್ತಿ 230 ಹಳ್ಳಿಗಳ ಸಮಸ್ಯೆಗಳನ್ನು ಆಲಿಸಿದ್ದೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ , ಗ್ರಾ.ಪಂ. ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಲಲಿತಮ್ಮ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷ ಷಂಷೀರ್ ಅಹಮ್ಮದ್, ತಾ.ಪಂ. ಇಒ ಕೆಂಚಪ್ಪ, ಪಿಡಿಒ ಮರುಳಸಿದ್ದಪ್ಪ, ಎಇಇ ಶಿವಮೂರ್ತಿ, ಲಿಂಗರಾಜ್, ಸಿಡಿಪಿಒ ಬೀರೇಂದ್ರ ಕುಮಾರ್, ಗ್ರಾ.ಪಂ ಸದಸ್ಯರಾದ ಶಂಭುಲಿಂಗಪ್ಪ, ನಸ್ರುಲ್ಲಾ, ಶಂಕರಪ್ಪ, ಮಂಜಮ್ಮ, ಬಸವರಾಜ್ ಇದ್ದರು