ADVERTISEMENT

ದಾವಣಗೆರೆ | ನಗರದಾದ್ಯಂತ ಜಿಟಿ ಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 5:41 IST
Last Updated 9 ನವೆಂಬರ್ 2023, 5:41 IST
ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯ ಬಳಿ ಬುಧವಾರ ಸಂಜೆ ಸುರಿದ ಜಿಟಿಜಿಟಿ ಮಳೆಯಲ್ಲೇ ವಿದ್ಯಾರ್ಥಿನಿಯರು ಪರಸ್ಪರ ಕೈ ಹಿಡಿದುಕೊಂಡು ರಸ್ತೆ ದಾಟುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯ ಬಳಿ ಬುಧವಾರ ಸಂಜೆ ಸುರಿದ ಜಿಟಿಜಿಟಿ ಮಳೆಯಲ್ಲೇ ವಿದ್ಯಾರ್ಥಿನಿಯರು ಪರಸ್ಪರ ಕೈ ಹಿಡಿದುಕೊಂಡು ರಸ್ತೆ ದಾಟುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದಲ್ಲಿ ಬುಧವಾರ ಸಂಜೆಯಿಂದ ರಾತ್ರಿವರೆಗೆ ಜಿಟಿ ಜಿಟಿ ಮಳೆ ಸುರಿಯಿತು. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು. ಸಂಜೆ 4.30ರ ಸುಮಾರಿಗೆ ಶುರುವಾದ ತುಂತುರು ಮಳೆ ರಾತ್ರಿವರೆಗೂ ಸುರಿಯಿತು.

ಸಂಜೆ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಛತ್ರಿ ಹಿಡಿದು ಓಡಾಡಿದರು. ವಾಹನ ಸವಾರರು ಮಳೆಯಲ್ಲೇ ಗಾಡಿ ಓಡಿಸಿದರು. ತುಂತುರು ಮಳೆಯೊಂದಿಗೆ ತಣ್ಣನೆಯ ಗಾಳಿ ಬೀಸಿದ್ದರಿಂದ ನಗರದಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗಿತ್ತು.

ತಗ್ಗಿದ ವ್ಯಾಪಾರ: ಸಂಜೆ ಸುರಿದ ಮಳೆಯಿಂದಾಗಿ ಬೀದಿ ಬದಿ ಅಂಗಡಿಗಳ ವ್ಯಾಪಾರ ಕಡಿಮೆಯಾಯಿತು. ‘ತಳ್ಳುಗಾಡಿ ಹೋಟೆಲ್‌’ಗಳ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಗೊಣಗಿದರು. ಸಂಜೆಯ ಜಿಟಿ ಜಿಟಿ ಮಳೆಯಿಂದಾಗಿ ಸಾರ್ವಜನಿಕರು ಹೆಚ್ಚಾಗಿ ಮನೆ ಬಿಟ್ಟು ಹೊರಬಾರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.