ಮಲೇಬೆನ್ನೂರು: ಮೂರ‍್ನಾಲ್ಕು ದಿನಗಳಿಂದ ಹದ ಮಳೆ ಸುರಿಯುತ್ತಿದ್ದು ತೋಟ ಬೆಳೆಗಾರರು, ಮೆಕ್ಕೆಜೋಳ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ತುಂತುರು, ಜಡಿ ಮಳೆ ಬಂದು ಖುಷ್ಕಿ ಬೆಳೆಗಾರರನ್ನು ಚಿಂತೆಗೀಡು ಮಾಡಿತ್ತು. ಮಳೆ ಬಂದ ನಂತರ ಬಿಸಿಲು ಬೀಳುವುದು ಗಾಳಿ ಬೀಸುವುದು ಸಾಮಾನ್ಯವಾಗಿತ್ತು. ಭಾನುವಾರದಿಂದ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆ ಸೋಮವಾರ ರಾತ್ರಿಯಿಡಿ ಸುರಿಯಿತು.
ಅಡಿಕೆ, ಬಾಳೆ ಹಾಗೂ ತೆಂಗಿನ ತೋಟಗಳಿಗೆ ಮಳೆಯಿಂದ ಅನುಕೂಲವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕಪ್ಪುತಲೆ ಹುಳು ಬಾಧೆ ನಿಯಂತ್ರಣ ಆಗುತ್ತದೆ ಎಂದು ತೋಟದ ಬೆಳೆಗಾರ ಕೊಮಾರನಹಳ್ಳಿ ರಂಗನಾಥ್ ತಿಳಿಸಿದರು.
ಮಳೆ ಪ್ರಮಾಣ ಕಡಿಮೆ ಇದ್ದು, ಕೆರೆಕಟ್ಟೆಗೆ ನೀರು ಹರಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.