ADVERTISEMENT

15 ವರ್ಷದ ನಂತರ ತುಂಬಿದ ರಾಮನಕೆರೆ: ಮಾಜಿ ಶಾಸಕ ಶಾಂತನಗೌಡರಿಂದ ಬಾಗಿನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:14 IST
Last Updated 12 ಆಗಸ್ಟ್ 2022, 5:14 IST
ಹೊನ್ನಾಳಿ ತಾಲ್ಲೂಕಿನ ಎಂ. ಹನುಮನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ ಗ್ರಾಮದ ರಾಮನಕೆರೆ 15 ವರ್ಷಗಳ ನಂತರ ತುಂಬಿದ್ದು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರು ಬಾಗಿನ ಅರ್ಪಿಸಿದರು.
ಹೊನ್ನಾಳಿ ತಾಲ್ಲೂಕಿನ ಎಂ. ಹನುಮನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ ಗ್ರಾಮದ ರಾಮನಕೆರೆ 15 ವರ್ಷಗಳ ನಂತರ ತುಂಬಿದ್ದು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರು ಬಾಗಿನ ಅರ್ಪಿಸಿದರು.   

ಹೊನ್ನಾಳಿ: ತಾಲ್ಲೂಕಿನ ಎಂ. ಹನುಮನಹಳ್ಳಿ, ಸಿಂಗಟಗೆರೆ ಗ್ರಾಮದ ರಾಮನಕೆರೆ 15 ವರ್ಷಗಳ ನಂತರ ತುಂಬಿ ಹರಿದಿದ್ದು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರು ಗುರುವಾರ ಬಾಗಿನ ಅರ್ಪಿಸಿದರು.

ರಾಮನಕೆರೆಯು 70 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಬೇವಿನಹಳ್ಳಿ, ಸಿಂಗಟಗೆರೆ, ಎಂ. ಹನುಮನಹಳ್ಳಿ, ತರಗನಹಳ್ಳಿ, ಮಾಸಡಿ, ನೇರಲಗುಂಡಿ, ತಿಮ್ಲಾಪುರ, ಸೇವಾಲಾಲ್‌ನಗರ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಸಾವಿರಾರು ಎಕರೆ ಜಮೀನುಗಳಿಗೆ ಉಪಯೋಗವಾಗಲಿದೆ. ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದು ಡಿ.ಜಿ. ಶಾಂತನಗೌಡ ಸಂತಸಪಟ್ಟರು.

ಡಿ.ಜಿ. ಶಾಂತನಗೌಡ ಅವರು ಅಧಿಕಾರದಲ್ಲಿದ್ದಾಗ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಗೆ ₹ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಕಾಮಗಾರಿ ಶೇ 70ರಷ್ಟು ಮುಗಿದಿದೆ. ಕೆರೆ ಅಭಿವೃದ್ಧಿಗೊಂಡ ನಂತರ ಹೊಳೆಯಿಂದ ಏತ ನೀರಾವರಿ ಮೂಲಕ ನೀರು ಹರಿಸಿ ಕೆರೆ ಸದಾ ತುಂಬಿರುವಂತೆ ನೋಡಿಕೊಳ್ಳಲಾಗುವುದು ಎಂದು ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ ತಿಳಿಸಿದರು.

ADVERTISEMENT

ತಿಮ್ಲಾಪುರ ವಿಎಸ್‍ಎಸ್‍ಎನ್ ಮಾಜಿ ಅಧ್ಯಕ್ಷ ಟಿ.ಜಿ. ರಮೇಶಗೌಡ, ಮುಖಂಡರಾದ ಗಜೇಂದ್ರಪ್ಪ ಮಾಸಡಿ, ಗದ್ದಿಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶ್ವಿನಿ ನಟರಾಜಪ್ಪ, ಎಂ. ಚಂದ್ರಪ್ಪ, ಶಿವಾನಂದಪ್ಪ, ಜಗದೀಶ್, ಸಿದ್ದೇಶ್ವರ, ಶಂಕರಪ್ಪ, ಶಿವಣ್ಣ ಮತ್ತು ವಿವಿಧ ಗ್ರಾಮಗಳ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.