ADVERTISEMENT

ಗಣೇಶ ಮೆರವಣಿಗೆ ವೇಳೆ ಡಿ.ಜೆ. ನಿಷೇಧ: ಡಿಸಿ ಆದೇಶ ಉಲ್ಲಂಘಿಸಿ ಎಂದ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:57 IST
Last Updated 29 ಆಗಸ್ಟ್ 2025, 4:57 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಡಿ.ಜೆ. ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೊರಡಿಸಿದ ಆದೇಶವನ್ನು ಹಿಂದೂ ಯುವಕರು ಉಲ್ಲಂಘಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.

‘ಗಣೇಶೋತ್ಸವದಲ್ಲಿ ಡಿ.ಜೆ. ಬಳಸುವುದು ಹಿಂದೂಗಳ ಸಂಪ್ರದಾಯ. ಸುಪ್ರೀಂ ಕೋರ್ಟ್‌ ಕೂಡ ಡಿ.ಜೆ.ಗೆ ಅವಕಾಶ ಕಲ್ಪಿಸಿದೆ. ನ್ಯಾಯಾಲಯದ ಷರತ್ತುಗಳನ್ನು ಪಾಲಿಸಿ ಡಿ.ಜೆ. ಬಳಕೆಗೆ ಅವಕಾಶ ನೀಡಬೇಕು. ಸಂಪೂರ್ಣ ನಿಷೇಧ ಹೇರುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಹಾವೇರಿ ಸೇರಿ ಹಲವು ಜಿಲ್ಲೆಗಳಲ್ಲಿ ಡಿ.ಜೆ. ಬಳಸಲು ಅವಕಾಶ ನೀಡಲಾಗಿದೆ. ಆದರೆ, ದಾವಣಗೆರೆಯಲ್ಲಿ ಇದಕ್ಕೆ ನಿಷೇಧ ಹೇರಲಾಗಿದೆ. ಇದನ್ನು ನೆಪವಾಗಿಟ್ಟುಕೊಂಡು ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ. ಹಿಂದೂ ಯುವಕರು ಡಿ.ಜೆ. ಬಳಸಿ ಶಕ್ತಿಯನ್ನು ಪ್ರದರ್ಶಿಸಬೇಕು’ ಎಂದರು.

ADVERTISEMENT

ಮಾಜಿ ಸಚಿವ ಬಸವರಾಜ ನಾಯ್ಕ, ಎನ್.ರಾಜಶೇಖರ್, ಮಾಡಾಳ್ ಮಲ್ಲಿಕಾರ್ಜುನ, ಚಂದ್ರಶೇಖರ್ ಪೂಜಾರ್ ಹಾಜರಿದ್ದರು.

ಡಿ.ಜೆ ನಿಷೇಧಿಸಿದ ಜಿಲ್ಲಾಡಳಿತವು ಆಜಾನ್‌ ಕೂಡ ನಿಷೇಧಿಸಬೇಕು. ಪಿ.ಬಿ. ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಮಾಡುವ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕಬೇಕು.
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.