
ಸಂತೇಬೆನ್ನೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಗೊಂಡು ನೂರು ವರ್ಷ ಸಂದಿವೆ. ಹಿಂದೂ ಸಮಾಜದ ಅಂತಃಸತ್ವ ಈಗ ಚುರುಕುಗೊಂಡಿದೆ. ಒಂದು ಜಾಗೃತ ಸಮಾಜವಾಗಿ ರೂಪುಗೊಂಡಿದೆ’ ಎಂದು ಆರ್‌ಎಸ್ಎಸ್ ವಕ್ತಾರ ಗು.ರುದ್ರಯ್ಯ ಹೇಳಿದರು.
ಇಲ್ಲಿನ ಕೆ.ರಾಜಣ್ಣ ಬಯಲು ನಿವೇಶನದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಾವಿರ ವರ್ಷ ಗುಲಾಮಗಿರಿಯಿಂದ ನರಳಿದ ಪರಿಣಾಮ ಹಿಂದೂಗಳ ನಡುವಿನ ಅಂತಃಸತ್ವ ಕುಗ್ಗಿತ್ತು. ಬ್ರಿಟಿಷರ ಒಡೆದಾಳುವ ನೀತಿಯಿಂದ ಒಗ್ಗಟ್ಟು ಒಡೆಯಿತು. ದೇಶದಲ್ಲಿ ಜಾತಿ ಸಮಸ್ಯೆ, ಭಾಷೆ, ನದಿ ನೀರು ಹಂಚಿಕೆ, ಗಡಿಗಳ ಜಗಳ ಇವೆ. ಇವು ಸಹಜವೇ ಆದರೂ ನಾವೆಲ್ಲಾ ಒಂದು’ ಎಂದು ಅಭಿಪ್ರಾಯಪಟ್ಟರು.
ಬಸವೇಶ್ವರ ನಾಟ್ಯ ಸಂಘದ ಮಕ್ಕಳು ಭರತ ನಾಟ್ಯ ಪ್ರದರ್ಶಿಸಿದರು. ನಾಗಲಿಂಗಾಚಾರ್, ಕೆ.ಬಸವರಾಜ್, ಕೆ.ಬಿ.ದೇವೇಂದ್ರಪ್ಪ, ಕಾಯಿಸ್ವಾಮಿ, ಓಂಕಾರಪ್ಪ, ಪ್ರಭು ಗೊಲ್ಲರಹಳ್ಳಿ, ಮಧು, ದರ್ಶನ್, ರಮೇಶ್, ಷಡಾಕ್ಷರಪ್ಪ, ಶರಣ್ ಬಡ್ಡಿ, ಸುರೇಶ್ ದೊಡ್ಡಬಾಯಿ, ಹಾಲೇಶ್, ಮುರುಳಿ ಗುಡಾಳ್, ಶ್ರೀಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.