
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ: ತಾಲ್ಲೂಕಿನ ಅನಂತನಹಳ್ಳಿ ಸಮೀಪ ಶನಿವಾರ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಲುಕಿ ಏಳು ಕುರಿಗಳು ಮೃತಪಟ್ಟಿವೆ.
ಕುರಿಗಳು ಅನಂತನಹಳ್ಳಿಯ ಕರಡಿ ನಾರಪ್ಪ ಅವರಿಗೆ ಸೇರಿವೆ. ಕುರಿಗಳನ್ನು ಮೇಯಿಸಲು ಹೋಗಿದ್ದಾಗ, ರೈಲು ಹಳಿ ಮೇಲೆ ಕುರಿಗಳು ನಿಂತಿದ್ದವು. ದೂರದಲ್ಲಿದ್ದ ಓಡಿಬಂದು ಕುರಿಗಳನ್ನು ಓಡಿಸುವಷ್ಟರಲ್ಲಿಯೇ ಕುರಿಗಳ ಮೇಲೆ ರೈಲು ಹರಿದಿದೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.
ಇದರಿಂದ ಕುರಿಗಾಹಿಗಳಿಗೆ ಲಕ್ಷಾಂತರ ನಷ್ಟವಾಗಿದೆ. ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.