
ನ್ಯಾಮತಿ: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಡಿ. 16ರಿಂದ 21ರವರೆಗೆ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯ 1,066ನೇ ಜಯಂತ್ಯುತ್ಸವಕ್ಕೆ ಜನರನ್ನು ಆಹ್ವಾನಿಸಲು ಸಂಚರಿಸುತ್ತಿರುವ ರಥವು ಶನಿವಾರ ಪಟ್ಟಣಕ್ಕೆ ಬಂದಾಗ ಭಕ್ತರು ಪಟಾಕಿ ಸಿಡಿಸಿ, ಹೂವಿನ ಮಾಲೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ವ್ಯವಸ್ಥಾಪಕ ಹೊಳಲೂರು ನಿಂಗಪ್ಪ, ನಿವೃತ್ತ ಉಪ ತಹಶೀಲ್ದಾರ್ ನ್ಯಾಮತಿ ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಗಂಜಿನಳ್ಳಿ ಹರೀಶ, ಜಿ.ರಾಜೇಂದ್ರ, ಪೊಲೀಸ್ ಇಲಾಖೆಯ ಕೆ.ಮಂಜಪ್ಪ, ವಾಲ್ಮೀಕಿ ಸಮುದಾಯದ ಮುಖಂಡರಾದ ವೀರಭದ್ರಪ್ಪ, ಕೆ.ಆರ್.ಗಂಗಾಧರ, ಏಜೆಂಟ್ ಶಂಭುಲಿಂಗ, ವಿರೇಶ, ತರಕಾರಿ ಬಾಬು, ಕರಿಸಿದ್ದಪ್ಪ, ಮಂಜು ಎವಿಎಂ, ಆಟೊ ಚಾಲಕರು, ಬಸ್ ಏಜೆಂಟರು ಮತ್ತು ಸಾರ್ವಜನಿಕರು ರಥವನ್ನು ಹೊನ್ನಾಳಿಗೆ ಬೀಳ್ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.