ಮಲೇಬೆನ್ನೂರು: ಶ್ರಾವಣ ಶನಿವಾರದ ಪ್ರಯುಕ್ತ ಹೋಬಳಿ ವ್ಯಾಪ್ತಿಯ ವಿವಿಧ ಹನುಮ ಹಾಗೂ ರಂಗನಾಥ ಸ್ವಾಮಿ ದೇಗುಲಗಳಲ್ಲಿ ಶನಿವಾರ ವಿಶೇಷ ಪೂಜೆ ಮಾಡಲಾಗಿತ್ತು. ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಕೊಮಾರನಹಳ್ಳಿ, ಹರಳಹಳ್ಳಿ, ಕುಂಬಳೂರು, ಕುಣಿಬೆಳಕೆರೆ, ಜಿಗಳಿ, ಆದಾಪುರದ ಆಂಜನೇಯ, ರಂಗನಾಥ ಸ್ವಾಮಿ ದೇವಾಲಯಗಳು, ಆಂಧ್ರಾ ಕ್ಯಾಂಪ್, ವಿನಾಯಕ ನಗರ, ಮಲ್ಲನಾಯಕನಹಳ್ಳಿ, ಭಾಸ್ಕರ್ ರಾವ್ ಕ್ಯಾಂಪಿನ ಸೀತಾರಾಮ, ಕೋದಂಡರಾಮ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಿ, ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ದೇವಾಲಯಗಳ ಮೂಲ ವಿಗ್ರಹಕ್ಕೆ ಪಂಚಾಮೃತ, ಜಲಾಭಿಷೇಕ, ವಿಶೇಷ ಅಲಂಕಾರ ಮಾಡಿದ್ದರು.
ಭಕ್ತರು ಹಾಗೂ ಶ್ವೇತ ವಸ್ತ್ರಧಾರಿ ದಾಸ ಸಮೂಹದವರು ದೇವಾಲಯದ ಮುಂಭಾಗದಲ್ಲಿ ನಿಂತು ಜಾಗಟೆ ಬಾರಿ ಶಂಖ ಊದಿ ಹರಕೆ ಸಮರ್ಪಿಸಿದರು. ಭಕ್ತ ಸಮೂಹ ಎಳ್ಳುಗಂಟಿನ ದೀಪ ಹಚ್ಚಿದ್ದರು.
ಕೆಲವೆಡೆ ದಾನಿಗಳ ಸಹಕಾರದಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.