ADVERTISEMENT

ಜಗಳೂರು | ಸಿದ್ದರಾಮಯ್ಯ ಬಜೆಟ್‌ಗೆ ಬಸವಣ್ಣನವರೇ ಪ್ರೇರಣೆ: ಶಾಸಕ ಬಿ.ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:16 IST
Last Updated 15 ಸೆಪ್ಟೆಂಬರ್ 2025, 6:16 IST
ಜಗಳೂರಿನಲ್ಲಿ ಮಂಗಳವಾರ ‘ಬಸವ ರಥ’ವನ್ನು ಸ್ವಾಗತಿಸಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು
ಜಗಳೂರಿನಲ್ಲಿ ಮಂಗಳವಾರ ‘ಬಸವ ರಥ’ವನ್ನು ಸ್ವಾಗತಿಸಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು   

ಜಗಳೂರು: ‘12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳು ಆಧುನಿಕ ಸಮಾಜದಲ್ಲಿ ಅತ್ಯಂತ ಪ್ರಸ್ತುತವಾಗಿವೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಬಸವಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಅಂಗವಾಗಿ ‘ಬಸವ ರಥ’ವನ್ನು ಸ್ವಾಗತಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಆಶಯ ಹಾಗೂ ಬಸವಣ್ಣನವರ ಉತ್ಪಾದನೆ ಮತ್ತು ಹಂಚಿಕೆ ತತ್ವದಡಿ ‘ಬಜೆಟ್’ ಕೊಡುವ ಮೂಲಕ 12ನೇ ಶತಮಾನದ ಬಸವಣ್ಣನ ಕಾಲಘಟ್ಟದಲ್ಲಿನ ಅನುಭವ ಮಂಟಪದ ಪ್ರತಿರೂಪದಂತೆ ಜನಪರ ಆಡಳಿತ ನೀಡುತ್ತಿದ್ದಾರೆ’ ಎಂದರು.

ADVERTISEMENT

ಬಸವ ಸಂಸ್ಕೃತಿ ಅಭಿಯಾನ ಸೆ.15ರಂದು ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣಲ್ಲಿ ವಚನ ಸಂವಾದ, ಸಂಜೆ 6ಕ್ಕೆ ಸಾರ್ವಜನಿಕ ಸಮಾವೇಶ ಹಾಗೂ ನಾಟಕಾಭಿನಯ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಸವಸಂಸ್ಕೃತಿ ಅಭಿಯಾನ ಸ್ವಾಗತ ಸಮಿತಿ ಸಂಚಾಲಕ ಕೆ.ಬಿ.ಪರಮೇಶ್ವರಪ್ಪ ತಿಳಿಸಿದರು.

ಪ್ರಚಾರ ಸಮಿತಿಯ ಮುಖ್ಯಸ್ಥರಾದ ಆವರಗೆರೆ ರುದ್ರಮುನಿ, ಕಡ್ಲೆಬಾಳು ಪ್ರಕಾಶ್, ಶಿವಮೂರ್ತಯ್ಯ, ಶ್ರೀನಿವಾಸ್, ರಾಜಣ್ಣ ನಿಬಗೂರು, ಶಿವಕುಮಾರ್ ಐಗೂರು, ಮುಖಂಡರಾದ ಬಿ. ಮಹೇಶ್ವರಪ್ಪ, ಕುಬೇರಪ್ಪ, ಮಾದಿಹಳ್ಳಿ ಮಂಜಪ್ಪ, ಓಬಳೇಶ್, ಮಲೆಮಾಚಿಕೆರೆ ಸತೀಶ್, ವೈ.ಎನ್. ಮಂಜುನಾಥ್, ಎನ್.ಟಿ. ಯರ‍್ರಿಸ್ವಾಮಿ, ಅಜ್ಜಪ್ಪ ನಾಡಿಗರ್, ಗೋಡೆ ಪ್ರಕಾಶ್, ರಾಜಣ್ಣ, ರೇಖಾ, ದಿದ್ದಿಗಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.