
ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 14 ಮತ್ತು 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಂಗವಿಕಲ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿಯುತ ಪ್ರಾಥಮಿಕ, ಪ್ರೌಢಶಾಲೆಗಳ ಅಂಗವಿಕಲ ವಿದ್ಯಾರ್ಥಿಗಳು ಮೈದಾನಕ್ಕಿಳಿದು ಸ್ಪರ್ಧೆ ಒಡ್ಡಿದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದವರು:
14 ವರ್ಷದೊಳಗಿನವರ ವಿಭಾಗ: ಬಾಲಕರು (ಪೂರ್ಣ ಅಂಧರು)– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಧನುಷ್ ಬಿ.ಸಿ. (ಪ್ರಥಮ). ಭಾಗಶಃ ಅಂಧರು– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಸೈಯದ್ ಅಫ್ರಿದಿ (ಪ್ರ). ಒಂದು ಕೈ ನ್ಯೂನತೆ – ಶಾಟ್‌ಪಟ್ ಹಾಗೂ 100 ಮೀ. ಓಟ: ವಿಜಯ್ ಕೆ. (ಪ್ರ), ಯಶವಂತ್ (ದ್ವಿ). ಒಂದು ಕಾಲು ನ್ಯೂನತೆ– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಶರತ್ (ಪ್ರ), ದರ್ಶನ್ (ದ್ವಿ), ಕಾರ್ತಿಕ್ (ತೃ). ಶ್ರವಣ ಮತ್ತು ವಾಕ್ ದೋಷ– ಶಾಟ್‌ಪಟ್: ಮೇಘರಾಜ್ (ಪ್ರ), ಮಹಾಂತೇಶ್ (ದ್ವಿ). ಜಾವೆಲಿನ್ ಥ್ರೋ: ಮಹಾಂತೇಶ್ (ಪ್ರ), ಆಕಾಶ್ (ದ್ವಿ). 50 ಮೀ. ಓಟ: ಕಿಶೋರ್ (ಪ್ರ), ಭೀಮನಗೌಡ (ದ್ವಿ).
ಬಾಲಕಿಯರು (ಪೂರ್ಣ ಅಂಧರು)– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಕವನ ಎನ್. (ಪ್ರ). ಭಾಗಶಃ ಅಂಧರು– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಯಶೋಧಾ (ಪ್ರ). ಒಂದು ಕಾಲು ನ್ಯೂನತೆ– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಆಯಿಷಾ ಸಿದ್ದಿಕ್ (ಪ್ರ), ಕಾವ್ಯಾ ಎಚ್.(ದ್ವಿ). ಶ್ರವಣ ಮತ್ತು ವಾಕ್ ದೋಷ– ಶಾಟ್‌ಪಟ್: ಯಶೋಧಾ ಜಿ. (ಪ್ರ), ನಂದಿನಿ ಆರ್. (ದ್ವಿ). ಜಾವೆಲಿನ್ ಥ್ರೋ: ಯಶೋಧಾ ಜಿ. (ಪ್ರ), ಹುಲಿಗೆಮ್ಮ (ದ್ವಿ). 50 ಮೀ. ಓಟ: ನಂದಿನಿ ಆರ್. (ಪ್ರ), ಭಾಗ್ಯಶ್ರೀ (ದ್ವಿ).
17 ವರ್ಷದೊಳಗಿನವರ ವಿಭಾಗ:
ಬಾಲಕರು (ಪೂರ್ಣ ಅಂಧರು)– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಸಿದ್ದೇಶ್ ಎಸ್. (ಪ್ರಥಮ), ಜೀವನ್ ಕೆ.ಎಲ್. (ದ್ವಿ). ಭಾಗಶಃ ಅಂಧರು–ಶಾಟ್‌ಪಟ್: ಸಂಜಯ್ ಪಿ.ಬಿ. (ಪ್ರ), ಲಿಖಿತ್ ಬಿ.ಎನ್. (ದ್ವಿ). ಜಾವೆಲಿನ್ ಥ್ರೋ: ಲಿಖಿತ್ ಬಿ.ಎನ್. (ಪ್ರ), ಸಂಜಯ್ ಪಿ.ಬಿ. (ದ್ವಿ). ಒಂದು ಕೈ ನ್ಯೂನತೆ – ಶಾಟ್‌ಪಟ್: ಪ್ರಜ್ವಲ್ ಸಿ.ಎಂ. (ಪ್ರ), ಮಧು ಟಿ.ಎಂ. (ದ್ವಿ). ಲಾಂಗ್ ಜಂಪ್: ಫರ್ದಾನ್ ಖಾನ್ (ಪ್ರ), ಭರತ್ ಎಸ್.ಎ. (ದ್ವಿ). 100 ಮೀ. ಓಟ: ಫರ್ದಾನ್ ಖಾನ್ (ಪ್ರ), ಪ್ರಜ್ವಲ್ ಸಿ.ಎಂ. (ದ್ವಿ). ಒಂದು ಕಾಲು ನ್ಯೂನತೆ– ಶಾಟ್‌ಪಟ್ ಹಾಗೂ ಜಾವೆಲಿನ್ ಥ್ರೋ: ಕಾರ್ತಿಕ್ (ಪ್ರ), ರಂಗಸ್ವಾಮಿ (ದ್ವಿ). ಶ್ರವಣ ಮತ್ತು ವಾಕ್ ದೋಷ– ಶಾಟ್‌ಪಟ್: ಸುಜಯ್ ಯು. (ಪ್ರ), ಅಚೇಯ್ (ದ್ವಿ). ಜಾವೆಲಿನ್ ಥ್ರೋ: ಮೈಲಾರಿ ಎಂ. (ಪ್ರ), ಸುಜನ್ ಯು. (ದ್ವಿ). 100 ಮೀ. ಓಟ: ಮೈಲಾರಿ ಎಂ. (ಪ್ರ), ಚೇತನ್ ಕುಮಾರ್ (ದ್ವಿ).
ಬಾಲಕಿಯರು (ಪೂರ್ಣ ಅಂಧರು): ಶಾಟ್‌ಪಟ್: ಭೂಮಿಕಾ ಬಿ. (ಪ್ರ), ಸಿಂಚನಾ ಆರ್. (ದ್ವಿ). ಜಾವೆಲಿನ್ ಥ್ರೋ: ಸಿಂಚನಾ ಆರ್. (ಪ್ರ), ಭೂಮಿಕಾ ಬಿ. (ದ್ವಿ). ಭಾಗಶಃ ಅಂಧರು– ಶಾಟ್‌ಪಟ್: ಸಂಧ್ಯಾ (ಪ್ರ), ಅಮಿನಾ ಬಾನು (ದ್ವಿ), ಜಾವೆಲಿನ್ ಥ್ರೋ: ಅಮಿನಾ ಬಾನು (ಪ್ರ), ಸಂಧ್ಯಾ (ದ್ವಿ). ಒಂದು ಕೈ ನ್ಯೂನತೆ – ಶಾಟ್‌ಪಟ್: ಹೇಮಾವತಿ ಎಚ್. (ಪ್ರ), ಮಾನಸ ಟಿ.ಎಲ್. (ದ್ವಿ). ಲಾಂಗ್ ಜಂಪ್: ಮಾನಸ ಟಿ.ಎಲ್. (ಪ್ರ), ರಾಜೇಶ್ವರಿ (ದ್ವಿ). 50 ಮೀ. ಓಟ: ಹೇಮಾವತಿ ಎಚ್. (ಪ್ರ), ರಾಜೇಶ್ವರಿ (ದ್ವಿ). ಒಂದು ಕಾಲು ನ್ಯೂನತೆ– ಶಾಟ್‌ಪಟ್: ಅನುಶ್ರೀ (ಪ್ರ), ಅನು ಎಲ್. (ದ್ವಿ), ಜಾವೆಲಿನ್ ಥ್ರೋ: ಕೀರ್ತನಾ ಕೆ.ಯು. (ಪ್ರ), ಅನು ಎಲ್. (ದ್ವಿ). ಶ್ರವಣ ಮತ್ತು ವಾಕ್ ದೋಷ– ಶಾಟ್‌ಪಟ್: ಅಂಬಿಕಾ (ಪ್ರ), ಪ್ರತೀಕ್ಷಾ (ದ್ವಿ). ಜಾವೆಲಿನ್ ಥ್ರೋ: ಸುಪ್ರಿಯಾ (ಪ್ರ), ಭಾರ್ಗವಿ (ದ್ವಿ). 50 ಮೀ. ಓಟ: ಭಾರ್ಗವಿ (ಪ್ರ), ಕಾವ್ಯಾ (ದ್ವಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.