ADVERTISEMENT

ಸವಾಲುಗಳನ್ನು ಎದುರಿಸಿದರೆ ಯಶಸ್ಸು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:12 IST
Last Updated 11 ಫೆಬ್ರುವರಿ 2020, 10:12 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೊ. ಬಿ.ಇ.ರಂಗಸ್ವಾಮಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ, ಪ್ರೊ. ಕೆ.ಎಸ್.ಬಸವರಾಜಪ್ಪ, ಜಿ.ಪಿ.ದೇಸಾಯಿ, ಡಾ.ಸದಾಶಿವಪ್ಪ, ಎ.ಜಿ.ಶಂಕರಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೊ. ಬಿ.ಇ.ರಂಗಸ್ವಾಮಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ, ಪ್ರೊ. ಕೆ.ಎಸ್.ಬಸವರಾಜಪ್ಪ, ಜಿ.ಪಿ.ದೇಸಾಯಿ, ಡಾ.ಸದಾಶಿವಪ್ಪ, ಎ.ಜಿ.ಶಂಕರಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ವಿದ್ಯಾರ್ಥಿಗಳಿಗೆ ಹಲವು ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಿ ಮುನ್ನುಗ್ಗಿದರೆ ಯಶಸ್ಸು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು.

ನಗರದ ಬಾಪೂಜಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ‘ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮ–2020 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಿನ ಕಾಲದಲ್ಲಿ ಕೇವಲ ಪದವಿ ಪಡೆದರಷ್ಟೇ ಕೆಲಸ ಸಿಗುವುದಿಲ್ಲ. ಸಂದರ್ಭಗಳು ಬೇರೆಯಾಗಿವೆ. ಆ ಸಂದರ್ಭಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕಿದೆ. ಸವಾಲುಗಳನ್ನು ಎದುರಿಸಬೇಕಾದರೆ ಹೆಚ್ಚು ಹೆಚ್ಚು ಪದವಿಗಳನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪದವಿ, ಚಿನ್ನದ ಪದಕ, ಉದ್ಯೋಗ ಪಡೆದರಷ್ಟೇ ಜೀವನವಲ್ಲ. ಧೀರೂಭಾಯಿ ಅಂಬಾನಿಯವರು ಯಾವುದೇ ಪಡೆದಿಲ್ಲ. ಆದರೂ ಅವರು ಯಶಸ್ವಿ ಉದ್ಯಮಿಯಾದರು. ಉದ್ಯೋಗ ಪಡೆಯಲು ಶಿಕ್ಷಣ ಅರ್ಹತೆ ಅಷ್ಟೇ. ಆದರೆ ಯಶಸ್ಸು ಪಡೆಯುವುದು ವಿಭಿನ್ನವಾಗಿರುತ್ತದೆ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಠಿಣ ಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಇಂದು ಬಹಳಷ್ಟು ಮಂದಿ ದೊಡ್ಡ ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ಆದರೆ ಅವರ ಮಕ್ಕಳಲ್ಲಿ ಆಸ್ತಿ ಹಂಚಿಕೆ ಸಂಬಂಧ ವ್ಯಾಜ್ಯಗಳು ಬರುತ್ತವೆ. ಸಂಪತ್ತು ಚಲನಶೀಲವಾಗಿದ್ದು, ಅದನ್ನು ನಿರ್ವಹಣೆ ಮಾಡುವುದು ಕಷ್ಟಕರ. ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಲಿಲ್ಲ ಎಂದರೆ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದರು.

ವಿದ್ಯಾರ್ಥಿಗಳಿಗೆ ಪದವಿ, ಉದ್ಯೋಗವಷ್ಟೆ ಸಾಲದು. ಹೇಗೆ ಬದುಕಬೇಕು ಎನ್ನುವ ಕಲೆಯೂ ಮುಖ್ಯ. ಯಶಸ್ಸು ಕೇವಲ ವೈಯಕ್ತಿಕ ಸಾಧನೆಯಾಗದೆ. ಸಮಾಜಕ್ಕೆ ಕೊಡುಗೆ ನೀಡುವ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ ಮಾತನಾಡಿ, ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಬೇಕು, ಉತ್ತಮ ತಂತ್ರಜ್ಞಾನದ ಮೂಲಕ ಸಮಾಜದ ಜನರಿಗೆ ಅನುಕೂಲವಾಗುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಸಂಚಾಲಕ ಡಾ.ಕೆ.ಎಸ್. ಬಸವರಾಜಪ್ಪ, ರಾಸಾಯನ ಶಾಸ್ತ್ರ ವಿಭಾದ ಮುಖ್ಯಸ್ಥ ಡಾ.ಬಿ.ಇ. ಬಸವರಾಜಪ್ಪ, ಡಾ.ಎ.ಜಿ. ಶಂಕರಮೂರ್ತಿ, ಡಾ.ಎನ್.ಎಸ್. ಬಸವರಾಜಪ್ಪ, ಜಿ.ಪಿ.ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.