ಜಗಳೂರು: ‘ರೋಗರುಜಿನಗಳು ಹಾಗೂ ಚಿಕಿತ್ಸೆ ಪ್ರಕ್ರಿಯೆ ಬಗ್ಗೆ ಜನಸಾಮಾನ್ಯರು ಅನವಶ್ಯಕವಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಪ್ರೀತಿ ಆರೈಕೆ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಟಿ.ಜಿ. ರವಿಕುಮಾರ್ ಹೇಳಿದರು.
ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಗುರುವಾರ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಸ್ತ್ರಚಿಕಿತ್ಸೆಯ ಬಗ್ಗೆ ಸಾರ್ವಜನಿಕರರು ಅನಗತ್ಯ ಭಯ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ವೈಜ್ಞಾನಿಕ ಮನೋಭಾವದ ಕೊರತೆ ಮತ್ತು ಮೂಡನಂಭಿಕೆಗಳ ಪರಿಣಾಮ ಸೂಕ್ತ ಚಿಕಿತ್ಸೆ ಪಡೆಯದಿರಲು ಕಾರಣ. ಆಧುನಿಕವಾಗಿ ಗುಣಮಟ್ಟದ ತಂತ್ರಜ್ಞಾನ ಹಾಗೂ ಪರಿಣಿತ ವೈದ್ಯರ ಸಹಾಯದಿಂದ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ರೋಗಿಗಳು ಗುಣಮುಖರಾಗುತ್ತಾರೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಪಿಡಿಒ ಅಂಬಿಕಾ, ಅಧ್ಯಕ್ಷೆ ರೂಪಾ, ಸದಸ್ಯರಾದ ರೇವಣಸಿದ್ದಪ್ಪ, ನಾರಾಯಣಪ್ಪ, ಜಗದೀಶ್ ಗೌಡ, ರಾಜಪ್ಪ, ತಿಪ್ಪೇಸ್ವಾಮಿ, ಮುಕುಂದ, ಸ್ವಾಮಿ, ಚನ್ನಪ್ಪ, ಎ.ಎಂ.ಕೆನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.