ಸಾಸ್ವೆಹಳ್ಳಿ: ಸಮೀಪದ ಹೊಟ್ಯಾಪುರ ಉಜ್ಜಯಿನಿ ಶಾಖಾ ಹಿರೇಮಠದಲ್ಲಿ ಎಳೆಯೊಂದಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಿ ಎಳೆಗೌರಮ್ಮನ ಹಬ್ಬವನ್ನು ಗುರುವಾರ ಆಚರಿಸಲಾಯಿತು.
ಹಿರೇಮಠದ ನಿಯೋಜಿತ ಓಂಕಾರೇಶ್ವರ ಮರಿದೇವರು ನೇತೃತ್ವದಲ್ಲಿ ಎಳೆಗೌರಮ್ಮನ ಕಲಶ ಸ್ಥಾಪಿಸಿ ವಿವಿಧ ಪುರೋಹಿತರ ಮಂತ್ರಘೋಷಣೆಯೊಂದಿಗೆ, ಶಾಸ್ತ್ರೋಕ್ತವಾಗಿ ರುದ್ರಾಭೀಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಹಿರೇಮಠದಲ್ಲಿ ಹಲವಾರು ವರ್ಷಗಳಿಂದ ಗೌರಿಯನ್ನು ಭಕ್ತಿಭಾವಗಳಿಂದ ಪೂಜಿಸುತ್ತಾ ಬಂದಿದ್ದಾರೆ. ಎಳೆಗೌರಮ್ಮನನ್ನು ಪ್ರತಿಷ್ಠಾಪಿಸಿದ ಹತ್ತಿಯ ಎಳೆಯನ್ನು ಮಠದಿಂದ ಸಾಸ್ವೆಹಳ್ಳಿ, ಹನುಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮದ ಭಕ್ತರು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ.
ಪ್ರತಿ ವರ್ಷವೂ ಭಾದ್ರಪದ ಮಾಸದ ಮೂಲ ನಕ್ಷತ್ರದ ದಿನದಂದು ಈ ಆರಾಧನೆ ವಾಡಿಕೆಯಂತೆ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.