
ಪ್ರಜಾವಾಣಿ ವಾರ್ತೆ
ನ್ಯಾಮತಿ: ‘ನಿತ್ಯದ ಜಂಜಾಟದಿಂದ ಮನಸ್ಸಿಗೆ ನೆಮ್ಮದಿ ಬೇಕಾದರೆ ಮಠ- ಮಂದಿರಗಳಿಗೆ ಭೇಟಿ ನೀಡಬೇಕು’ ಎಂದು ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕುಂಬಾರ ಬೀದಿಯ ಅಮ್ಮನಮರದ ದೇವಿ ನೂತನ ಪ್ರತಿಷ್ಠಾಪನೆ, 23ನೇ ವರ್ಷದ ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಸಾಂಸಾರಿಕ ಒತ್ತಡದ ಜೀವನದಿಂದ ಹೊರಬರಲು ಇಚ್ಛಾಶಕ್ತಿ ತೋರಬೇಕು. ಶರಣರು ಸಂಸಾರದಲ್ಲಿ ಇದ್ದು ಸಾಧನೆಯ ಶಿಖರವನ್ನು ಏರಿದರು. ಬದುಕನ್ನು ಯಶಸ್ವಿ ಮಾಡಿಕೊಳ್ಳಬೇಕು, ಕರ್ತವ್ಯವನ್ನು ಪಾಲಿಸುವವರು ನಿತ್ಯ ಸುಖಿಗಳಾಗಿರುತ್ತಾರೆ’ ಎಂದರು.
ವರ್ತಕ ನುಚ್ಚಿನ ವಾಗೀಶ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ಶಂಕರಪ್ಪ ಹೊಸಮನೆ ಅಧ್ಯಕ್ಷತೆ ವಹಿಸಿದ್ದರು. ಅಂತರ್ಜಲ ಸಂಶೋಧಕ ಕಂಕನಹಳ್ಳಿ ಕೆ.ಜಿ.ಚಂದ್ರಶೇಖರಪ್ಪ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್‌ನ ಸಹಕಾರ್ಯದರ್ಶಿ ಹೊಸಮನೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಚ್.ಕೆ.ಚನ್ನೇಶಪ್ಪ, ಉಪನ್ಯಾಸಕ ಪ್ರವೀಣಕುಮಾರ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ, ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಭೇಟಿ ನೀಡಿ ದೇವಿ ದರ್ಶನ ಪಡೆದರು.
ಟ್ರಸ್ಟ್‌ನ ಖಜಾಂಚಿ ಎನ್.ಎಂ.ಮಲ್ಲೇಶಪ್ಪ, ಸದಸ್ಯರಾದ ಜಿನಕೇರಿ ಮಲ್ಲಿಕಾರ್ಜುನಪ್ಪ, ಪುಟ್ಟಪ್ಪ ಶಿಕ್ಷಕರು, ಚನ್ನಬಸಪ್ಪ, ಡಿಪಿಕೆ ಸಿದ್ದಪ್ಪ, ಎಚ್.ರೇಣುಕಪ್ಪ, ಎಂ.ಕರಿಬಸಪ್ಪ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಸೇವೆ ಸಲ್ಲಿಸಿದ ವಿನಾಯಕ ಬಳಗದ ಯುವಕರು, ವೀರಗಾಸೆ ತಂಡದವರು, ಲಲಿತಾ ಸಹಸ್ರ ನಾಮಾವಳಿ ಬಳಗದ ಮಹಿಳೆಯರನ್ನು ಹಾಗೂ ಸೇವಾಕರ್ತರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.