ADVERTISEMENT

ಕೋವಿಡ್ ಲಸಿಕೆ ಮತ್ತೆ ಖಾಲಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 5:13 IST
Last Updated 26 ಏಪ್ರಿಲ್ 2021, 5:13 IST
ಪಟ್ಟಿ
ಪಟ್ಟಿ   

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಖಾಲಿಯಾಗಿದ್ದು, ಭಾನುವಾರ ಜನರಿಗೆ ಲಸಿಕೆ ಸಿಕ್ಕಿಲ್ಲ. ಸೋಮವಾರವೂ ಲಸಿಕೆ ಸಿಗುವುದು ಅನುಮಾನವಿದ್ದು, ಜನರಿಗೆ ನಿರಾಶೆಯಾಗಲಿದೆ.

‘ಶನಿವಾರವಷ್ಟೇ 7 ಸಾವಿರ ಡೋಸ್‌ಗಳು ಬಂದಿದ್ದು, ಅವುಗಳಲ್ಲಿ 2 ಸಾವಿರ ಡೋಸ್ ಬಾಕಿ ಇದೆ. ಸೋಮವಾರ ಬೆಳಿಗ್ಗೆ 11ಕ್ಕೆ ಖಾಲಿಯಾಗುತ್ತವೆ. ಸೋಮವಾರ 6000 ಡೋಸ್‌ ಕೋವಿಶೀಲ್ಡ್ ಲಸಿಕೆಗಳು ಬೆಂಗಳೂರಿಗೆ ಬರಲಿದ್ದು, ದಾವಣಗೆರೆಗೆ ಬರುವುದು ಸಂಜೆಯಾಗುತ್ತದೆ. ಸಾಯಂಕಾಲದ ವೇಳೆಗೆ ತಾಲ್ಲೂಕು ಕೇಂದ್ರಗಳಿಗೆ ತಲುಪುತ್ತದೆ.ಮಂಗಳವಾರದಿಂದ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ತಿಳಿಸಿದರು.

‘ಸಿ.ಜಿ. ಆಸ್ಪತ್ರೆಯಲ್ಲಿ 400 ಡೋಸ್ ಲಸಿಕೆ ಉಳಿದಿದ್ದು, ಬೆಳಿಗ್ಗೆಯೇ ಖಾಲಿಯಾಗುವ ನಿರೀಕ್ಷೆ ಇದೆ. ಕೋವಿಡ್ ಲಸಿಕೆ ತಡವಾಗಿ ಬರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ನಿರೀಕ್ಷಿಸಿದ ಮಟ್ಟಕ್ಕೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಗುರಿ ತಲುಪದಿದ್ದರೆ ಲಸಿಕೆ ಕಡಿಮೆ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಕೋವಿಡ್‌ನಿಂದ ಮಹಿಳೆ ಸಾವು

ಚನ್ನಗಿರಿ ಪಟ್ಟಣದ ದುರ್ಗಾಂಬಿಕಾ ರಸ್ತೆಯ 51 ವರ್ಷದ ಮಹಿಳೆಯೊಬ್ಬರು ಕೋವಿಡ್‌ನಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, 242 ಮಂದಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ.

ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 157 ಮಂದಿಗೆ ಕೊರೊನಾ ವೈರಸ್‌ ತಗುಲಿದ್ದು, ಹರಿಹರದ 24, ಜಗಳೂರಿನ 16, ಚನ್ನಗಿರಿಯ 24 ಹೊನ್ನಾಳಿಯ 9 ಹಾಗೂ ಹೊರ ಜಿಲ್ಲೆಯ 12 ಮಂದಿಗೆ ಕೋವಿಡ್ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.