ಮಲೇಬೆನ್ನೂರು: ಸಮೀಪದ ಕುಣಿಬೆಳಕೆರೆ ಹಾಗೂ ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ ಗ್ರಾಮದ ಜನರ ನಡುವೆ ದೇವರ ಕೋಣದ ವಿಚಾರವಾಗಿ ಜಟಾಪಟಿ ನಡೆದಿದೆ.
5 ದಿನಗಳ ಹಿಂದೆ ದೇವರಬೆಳಕೆರೆ ಗ್ರಾಮದಲ್ಲಿ ಕೋಣವು ಮೇಯುತ್ತಿದ್ದಾಗ ಕುಳಗಟ್ಟೆ ಗ್ರಾಮಸ್ಥರು ಕಳೆದುಹೋಗಿದ್ದ ತಮ್ಮ ಗ್ರಾಮದ ದೇವರಕೋಣ ಸಿಕ್ಕಿತೆಂದು ಸೆರೆ ಹಿಡಿದು ಟ್ರ್ಯಾಕ್ಟರ್ ಮೂಲಕ ತಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಕುಣಿಬೆಳಕೆರೆ ಗ್ರಾಮಸ್ಥರು ತಮ್ಮ ಕೋಣ ಸುಮಾರು 8 ವರ್ಷ ಪ್ರಾಯದ್ದು, ಕರಿಯಮ್ಮ ದೇವರಿಗೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಕುಳಗಟ್ಟೆ ಗ್ರಾಮಸ್ಥರು, ತಮ್ಮ ಕೋಣ 3-4 ವರ್ಷ ಪ್ರಾಯದ್ದು, ಗ್ರಾಮ ದೇವತೆಗೆ ಬಿಟ್ಟಿದ್ದೇವೆ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಎರಡೂ ಗ್ರಾಮಗಳ ಜನರು ತಮ್ಮ ತಮ್ಮ ಠಾಣಾ ವ್ಯಾಪ್ತಿಯ ಮಲೇಬೆನ್ನೂರು ಹಾಗೂ ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪಶುವೈದ್ಯ ಅರವಿಂದ ಅವರು ಹಲ್ಲಿನ ಪರೀಕ್ಷೆ ನಡೆಸಿ ಕೋಣ 6 ವರ್ಷ ಪ್ರಾಯ ಎಂದು ಅಂದಾಜು ಮಾಡಿದ್ದಾರೆ. ಕೋಣವನ್ನು ಸದ್ಯ ಶಿವಮೊಗ್ಗದ ಗೋಶಾಲೆಯಲ್ಲಿ ಇರಿಸಲಾಗಿದೆ. ವಿವಾದ ಇತ್ಯರ್ಥ ಸಂಬಂದ ಸೋಮವಾರ ಪೊಲೀಸರ ಸಮ್ಮುಖದಲ್ಲಿ ಸಭೆ ನಡೆಯಲಲಿದೆ ಎಂದು ‘ಪ್ರಜಾವಾಣಿʼಗೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.