ADVERTISEMENT

ರಾಮಕೃಷ್ಣ ಹತ್ಯೆಯ ಪಾರದರ್ಶಕ ತನಿಖೆಯಾಗಲಿ

ಮಾಜಿ ಶಾಸಕ ಎಚ್.ಪಿ. ರಾಜೇಶ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:23 IST
Last Updated 15 ಜನವರಿ 2023, 5:23 IST
ಜಗಳೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಈಚೆಗೆ ಹತ್ಯೆಯಾದ ರಾಮಕೃಷ್ಣ ಅವರ ಸಮಾಧಿಗೆ ಮಾಜಿ ಶಾಸಕ ಎಚ್.ಪಿ. ರಾಜೇಶ್ ಹಾಗೂ ಮುಖಂಡರು ನಮನ ಸಲ್ಲಿಸಿದರು.
ಜಗಳೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಈಚೆಗೆ ಹತ್ಯೆಯಾದ ರಾಮಕೃಷ್ಣ ಅವರ ಸಮಾಧಿಗೆ ಮಾಜಿ ಶಾಸಕ ಎಚ್.ಪಿ. ರಾಜೇಶ್ ಹಾಗೂ ಮುಖಂಡರು ನಮನ ಸಲ್ಲಿಸಿದರು.   

ಜಗಳೂರು: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಗೌರಿಪುರ ಗ್ರಾಮದ ರಾಮಕೃಷ್ಣ ಸಾವಿನ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಒತ್ತಾಯಿಸಿದರು.

ತಾಲ್ಲೂಕಿನ ಗೌರಿಪುರ ಗ್ರಾಮದ ಮೃತ ರಾಮಕೃಷ್ಣ ಅವರ ನಿವಾಸಕ್ಕೆ ತೆರಳಿ ಪೋಷಕರನ್ನು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ತಾಲ್ಲೂಕಿನಲ್ಲಿ ಇಂತಹ ದುರ್ಘಟನೆ ಘಟನೆ ನೆಡೆಯಬಾರದಿತ್ತು. ಪಕ್ಷ, ಜಾತಿ ಭೇದವಿಲ್ಲದೇ ಎಲ್ಲರೂ ದುಷ್ಕ್ರತ್ಯವನ್ನು ಖಂಡಿಸಿದ್ದಾರೆ. ಆರೋಪಿಗಳು ಯಾರೇ ಇರಲಿ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ADVERTISEMENT

‘ಭ್ರಷ್ಟಾಚಾರಾದ ಪಿಡುಗಿನ ವಿರುದ್ಧ ಹೋರಾಡಿದ ಕಾರಣಕ್ಕೆ ನನ್ನ ಮಗ ಕೊಲೆಯಾಗಿ ಹುತಾತ್ಮನಾಗಿ
ದ್ದಾನೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನುನು ಕ್ರಮ ಕೈಗೊಳ್ಳಬೇಕು. ನನ್ನ ಮಗನನ್ನು ಕೊಲೆಗೈದವರಿಗೆ ತಕ್ಕ ಶಿಕ್ಷೆಯಾಗಬೇಕು. ಆರೋಪಿ ಪಿಡಿಒ ನಾಗರಾಜ್ ಅಕ್ರಮವಾಗಿ ಸಂಪಾದಿಸಿದ ಹಣ ಹಾಗೂ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು, ಸೇವೆಯಿಂದ ವಜಾ ಮಾಡಬೇಕು’ ಎಂದು ಮೃತ ರಾಮಕೃಷ್ಷ ತಂದೆ ಪ್ರಕಾಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ‌ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಮುಖಂಡರಾದ ಸೂರಲಿಂಗಪ್ಪ, ಎಸ್.ಬಿ. ಕುಬೇಂದ್ರಪ್ಪ, ಡಿ.ಆರ್. ಹನುಮಂತಪ್ಪ, ಸಿ.ಡಿ. ಹನುಮಂತಪ್ಪ, ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಮಾಳಮ್ಮನಹಳ್ಳಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.