ADVERTISEMENT

ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 6:06 IST
Last Updated 12 ಏಪ್ರಿಲ್ 2021, 6:06 IST
ದಾವಣಗೆರೆ ಮದಕರಿ ನಾಯಕ ವೃತ್ತದಲ್ಲಿರುವ ದುರ್ಗಾಂಬಿಕಾ  ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಲಸಿಕಾ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು.
ದಾವಣಗೆರೆ ಮದಕರಿ ನಾಯಕ ವೃತ್ತದಲ್ಲಿರುವ ದುರ್ಗಾಂಬಿಕಾ  ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಲಸಿಕಾ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು.   

ದಾವಣಗೆರೆ: ‘ಕೊರೊನಾ ಬಂದರೂ ಮರಣ ಉಂಟಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ನಗರದ ಮದಕರಿ ನಾಯಕ ವೃತ್ತದಲ್ಲಿರುವ ದುರ್ಗಾಂಬಿಕ ಪ್ರೌಢಶಾಲೆಯಲ್ಲಿ ಸುಭಿಕ್ಷಾ ಫೌಂಡೇಷನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಾನುವಾರ ಆಯೋಜಿಸಲಾಗಿದ್ದ ಲಸಿಕಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲ ಸುತ್ತಿನಲ್ಲಿ ದುರ್ಗಾಂಬಿಕ ದೇವಸ್ಥಾನದ ಧರ್ಮದರ್ಶಿ ಚನ್ನಬಸಪ್ಪ, ಯಶವಂತರಾವ್ ಜಾಧವ್ ಮುಂತಾದವರು ಲಸಿಕೆ ಪಡೆದಿದ್ದಾರೆ. ಉಳಿದವರು ಕೂಡ ವದಂತಿಗಳಿಗೆ ಕಿವಿಕೊಡದೇ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಗೌಡ್ರು ಚನ್ನಬಸಪ್ಪ ಮಾತನಾಡಿ, ‘ಪ್ರಪಂಚದಾದ್ಯಂತ ಬಂದಿರುವ ಈ ಕಾಯಿಲೆ ಎಚ್ಚರ ತಪ್ಪಿದರೆ ಮಾರಕವಾಗುತ್ತದೆ. ಈಗಾಗಲೇ ಬಂದು ಹೋಗಿತ್ತು. ಈಗ ಮತ್ತೆ ಮರುಕಳಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು. ಲಸಿಕೆ ಹಾಕಿಸಿಕೊಳ್ಳಿ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ’ ಎಂದರು.

ಡಿಎಚ್‍ಒ ಡಾ.ನಾಗರಾಜ್, ಆರ್‌ಸಿಎಚ್‌ಒ ಡಾ. ಮೀನಾಕ್ಷಿ, ಪಾಲಿಕೆ ಸದಸ್ಯೆ ಗಾಯಿತ್ರಿ ಖಂಡೋಜಿ ರಾವ್, ಸುಭಿಕ್ಷಾ ಫೌಂಡೇಶನ್‌ನ ಸೌಮ್ಯಾ, ಭಾಗ್ಯ, ಆಶಾ ಮರಿಯೋಜಿರಾವ್, ಹನುಮಂತ ರಾವ್ ಸಾವಂತ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.