ADVERTISEMENT

Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 13:15 IST
Last Updated 15 ಡಿಸೆಂಬರ್ 2025, 13:15 IST

ದಾವಣಗೆರೆಯ ರಾಜಕೀಯ ವಲಯ ಎಂದೊಡನೆ ಪ್ರಮುಖವಾಗಿ ಕೇಳಿ ಬರುತ್ತಿದ್ದ ಹೆಸರು ಶಾಮನೂರು ಶಿವಶಂಕರಪ್ಪ ಅವರದು. ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಹೆಸರಾಗಿದ್ದ ದಾವಣಗೆರೆಯನ್ನು, ವಿದ್ಯಾಕಾಶಿ ಎಂದು ಜನ ಈಗ ಕರೆಯುತ್ತಿದ್ದಾರೆಂದರೆ, ಅದರ ಶ್ರೇಯ ಸಲ್ಲಬೇಕಾದದ್ದು ಶಿವಶಂಕರಪ್ಪನವರಿಗೆ. ಸದ್ಯ, ದೇಶದಲ್ಲಿ ಅತಿ ಹಿರಿಯ ಶಾಸಕರೆನಿಸಿಕೊಂಡಿದ್ದ ಶಿವಶಂಕರಪ್ಪನವರು, ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನರಾದರು. 95 ವರ್ಷಗಳ ಸಾರ್ಥಕ ಬದುಕು ಸವೆಸಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.