ದಾವಣಗೆರೆ:ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಕೆ.ಮಲ್ಲಪ್ಪ (92) ಸೋಮವಾರ ಬೆಳಿಗ್ಗೆ ನಗರದ ಆಂಜನೇಯ ಬಡಾವಣೆಯ ಸ್ವಗೃಹದಲ್ಲಿ ನಿಧನರಾದರು.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ 4.30ಕ್ಕೆ ದಾವಣಗೆರೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
1929ರಏಪ್ರಿಲ್15ರಂದುಜನಿಸಿದ್ದರು. ಮುಂದೆ ಜನಸೇವೆಯಲ್ಲಿ ನಿರತರಾಗಿ ರಾಜಕೀಯ ಪ್ರವೇಶ ಪಡೆದಿದ್ದರು, ಹರಿಹರ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಶಾಸಕರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ನಿಗಮ ಹಾಗೂ ಬಯಲು ಸೀಮೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಕಾಗಿನೆಲೆ ಮಹಾಸಂಸ್ಥಾನ ಪೀಠ ನಿರ್ಮಾಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪೀಠ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು.. ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕುರುಬ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡಿದ್ದರು.. ವಿರೋಧಪಕ್ಷದನಾಯಕ ಸಿದ್ದರಾಮಯ್ಯನವರ ಆಪ್ತರಾಗಿದ್ದ ಕೆ.ಮಲ್ಲಪ್ಪ, ಅಹಿಂದಾ ಸಂಘಟನೆಯ ಪ್ರಮುಖ ರೂವಾರಿಗಳಾಗಿದ್ದರು,
ನೂರಾರು ಕ್ರೀಡಾಪಟುಗಳನ್ನು ಬೆಳೆಸಿದ್ದವರು.ಬೀರಲಿಂಗೇಶ್ಚರ ವ್ಯಾಯಾಮ ಶಾಲೆ ಮೂಲಕ ಹಲವು ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದ್ದರು.ಇಳಿ ವಯಸ್ಸಿನಲ್ಲೂ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಎಸ್‌ಪಿ ಕಚೇರಿ ಕಡೆಗೆ ತೆರಳುವ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಾಗ ಅಲ್ಲಿದ್ದ ದೇವರಾಜಅರಸುಅವರಪ್ರತಿಮೆಯನ್ನುಮೂರುವರ್ಷಗಳಹಿಂದೆತೆರವುಗೊಳಿಸಲಾಗಿತ್ತು.ಅದನ್ನುಮತ್ತೆಸ್ಥಾಪನೆಮಾಡಿರಲಿಲ್ಲ.ಹಿಂದುಳಿದನಾಯಕರಾಗಿದ್ದಅರಸುಅವರಪ್ರತಿಮೆಇರಲೇಬೇಕುಎಂದುನಿರಂತರಹೋರಾಟಮಾಡಿದ್ದರು.ಪ್ರತಿಮೆಸ್ಥಾಪನೆಗೆಧೂಡಾಕೂಡಒಪ್ಪಿತ್ತು.ಆದರೆಸ್ಥಾಪನೆಯಾಗುವುದನ್ನುನೋಡುವಮೊದಲೇಅವರುನಿಧನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.