
ನ್ಯಾಮತಿ: ಪಟ್ಟಣದ ಪಾಂಡುರಂಗ ಮಂದಿರದಲ್ಲಿ ೩೮ನೇ ವರ್ಷದ ವಿಠಲ-ರುಖುಮಾಯಿ ದಿಂಡಿ ಉತ್ಸ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಈ ಸಲುವಾಗಿ ವಿಠ್ಠಲ-ರುಖುಮಾಯಿ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಬೆಣ್ಣೆಆಲಂಕಾರ ಪೂಜೆ, ಕಾಕಡಾರತಿ ನೆರವೇರಿಸಿದ ನಂತರಆಲಂಕೃತಗೊಂಡ ವಾಹನದಲ್ಲಿ ವಿಠ್ಠಲ-ರುಖುಮಾಯಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಪುರುಷರು ಮತ್ತು ಮಹಿಳೆಯರು, ಬಾಲಕರು ತಾಳ, ಮೃದಂಗ ಬಾರಿಸುತ್ತ, ಭಕ್ತಿಯಿಂz ಕುಣಿಯುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು.ಮನೆಗಳ ಮುಂದೆ ಸಂತರ ಪಾದಪೂಜೆ ಮಾಡುವುದು ಕಂಡು ಬಂದಿತು.
ಶನಿವಾರ ರಂಗೋಲಿ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಹಾಗೂ ಪೋತಿ ಸ್ಥಾಪನೆ ನಂತರ ರಾತ್ರಿಯಿಡಿ ಹರಿಭಜನಾ ಪಂಡಿತರು ಪಾಳಿ ಭಜನೆ, ಸಂತವಾಣಿ, ಭಾರೂಡ್ ಕಾರ್ಯಕ್ರಮ ನಡೆಯಿತು.
ದೇವಸ್ಥಾನ ಸಮಿತಿಯಿಂದ ಸಾಮೂಹಿಕ ಅನ್ನ ಸಂತರ್ಪಣೆಏರ್ಪಡಿಸಲಾಗಿತ್ತು.ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ನಾಮದೇವ ಸಿಂಪಿ ಸಮುದಾಯ, ವಿಠ್ಠಲ-ರುಖುಮಾಯಿ ದಿಂಡಿ ಉತ್ಸವ ಸಮಿತಿ, ಭಜನಾ ಮಂಡಳಿ, ಯುವಕ ಮಂಡಳಿ ಸಮಿತಿಯವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.