ADVERTISEMENT

ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 8:15 IST
Last Updated 25 ಆಗಸ್ಟ್ 2011, 8:15 IST
ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗೆ ದೂರು   
ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯಿತಿಯು ನೆಹರು ನಗರ ಬಡಾವಣೆಯ ವಾರ್ಡ್ ನಂಬರ್ 6ರಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಆಪಾದಿಸಿರುವ ನಾಗರಿಕರು, ಕೆಲಸವನ್ನು ಸ್ಥಗಿತಗೊಳಿಸಿದ್ದು, ಉತ್ತಮ ಸಾಮಗ್ರಿಗಳನ್ನು ಬಳಸುವಂತೆ ಆಗ್ರಹಿಸಿದ್ದಾರೆ.

ಚರಂಡಿ ಕಾಮಗಾರಿಗೆ ಬಳಸಿರುವ ಸಾಮಗ್ರಿ ತೀರ ಕಳಪೆಯಾಗಿದ್ದು,  ಮಣ್ಣು ಮಿಶ್ರಿತವಾದ ಉಸುಕು, ತೀರ ಕಳಪೆಯಾದ  ಕಡಿಯನ್ನು ಬಳಸಲಾಗುತ್ತದೆ. ಕೆಲಸ ಆದ ಚರಂಡಿಯ ಕಾಂಕ್ರೀಟನ್ನು ಕೈಯಲ್ಲಿ ಹಿಡಿದು ನೋಡಿದರೆ ಕಳಚಿ ಬೀಳುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದಕಾರಣ ಸಾರ್ವಜನಿಕರು  ಕಳಪೆ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಎಂದಿರುವ ಸಂತೋಷ ಕಾಕಡೆ ಹಾಗೂ ಮಂಜು ಬರಗುಂಡಿ, ಸ್ಥಳೀಯ ಆಡಳಿತ ಉತ್ತಮ ಕೆಲಸ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 ಈ ಕುರಿತು ಪಟ್ಟಣ  ಪಂಚಾತಿ ಸದಸ್ಯ ಕಿರಣ ಗಡಕರ ಪ್ರಜಾವಾಣಿಯೊಂದಿಗೆ ಮಾತನಾಡಿ, ಎಸ್‌ಎಫ್‌ಸಿ ಅನುದಾನದಲ್ಲಿ,  250 ಮೀಟರ್ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ರೂ 5 ಲಕ್ಷ ವೆಚ್ಚದ ಕಾಮಗಾರಿಯಾಗಿದೆ.  ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಹೇಳಿದರೂ ಪ್ರಯೋಜನವಾಗದ ಕಾರಣ ಜಿಲ್ಲಾಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.