ADVERTISEMENT

ಮಗುವನ್ನು ಕೆಂಡದಲ್ಲಿ ಹಾಕಿ ಹರಕೆ ತೀರಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 7:22 IST
Last Updated 2 ಅಕ್ಟೋಬರ್ 2017, 7:22 IST
ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮದಲ್ಲಿ, ಮೊಹರಂ ಅಂಗವಾಗಿ ಭಾನುವಾರ ಹಾಕಿದ ಅಗ್ನಿಕುಂಡದ ಕೆಂಡದ ಮೇಲೆ ಮಗುವನ್ನು ಹಾಕಿ ಹರಕೆ ತೀರಿಸಲಾಯಿತು
ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮದಲ್ಲಿ, ಮೊಹರಂ ಅಂಗವಾಗಿ ಭಾನುವಾರ ಹಾಕಿದ ಅಗ್ನಿಕುಂಡದ ಕೆಂಡದ ಮೇಲೆ ಮಗುವನ್ನು ಹಾಕಿ ಹರಕೆ ತೀರಿಸಲಾಯಿತು   

ಕುಂದಗೋಳ: ತಮಗೆ ಮಗುವಾದರೆ ಅದನ್ನು ಮೊಹರಂ ಆಚರಣೆಯ ಅಗ್ನಿಕುಂಡದ ಕೆಂಡದ ಮೇಲೆ ಹಾಕುವುದಾಗಿ ಹರಕೆ ಹೊತ್ತಿದ್ದ, ತಾಲ್ಲೂಕಿನ ಅಲ್ಲಾಪುರದ ಗ್ರಾಮದ ಮಹಿಳೆಯೊಬ್ಬರು ಭಾನುವಾರ ಹರಕೆ ತೀರಿಸಿದರು.

ಗ್ರಾಮದ ಸುಶೀಲಾ ಅವರಿಗೆ ಈ ಹಿಂದೆ ಮೂರು ಮಕ್ಕಳಾಗಿದ್ದರೂ ಒಂದೂ ಬದುಕಿರಲಿಲ್ಲ. ಹೀಗಾಗಿ ಅವರು, ‘ಗಂಡು ಮಗು ಜನಿಸಿದರೆ ನಿನ್ನ ಮುಂದೆ ಹಾಕುವ ಅಗ್ನಿಕುಂಡದಲ್ಲಿ ಹಾಕುತ್ತೇನೆ’ ಎಂದು ಕಳೆದ ಮೊಹರಂ ಸಂದರ್ಭದಲ್ಲಿ ಮುಸ್ಲಿಂ ಪಂಜಾ ಬೀಬಿ ಫಾತೀಮಾಗೆ ಹರಕೆ ಹೊತ್ತಿದ್ದರು.

ಈ ವರ್ಷ ಗಂಡು ಮಗುವಿನ ತಾಯಿಯಾಗಿರುವ ಅವರು, ಹರಕೆ ತೀರಿಸಲು ಬಂದಿದ್ದರು. ಅವರ ಇಚ್ಛೆಯಂತೆ ಪಂಜಾದ ಉಸ್ತುವಾರಿ ವಹಿಸಿದ್ದ ಮುಲ್ಲಾ ಸಾಹೇಬ್‌, ಕೆಂಡದ ಮೇಲೆ ಬಾಳೆ ಎಲೆ ಹಾಗೂ ಸೇವಂತಿಗೆ ಹೂಗಳನ್ನು ಹಾಕಿ, ಅದರ ಮೇಲೆ ಮಗುವನ್ನು ಎರಡು ನಿಮಿಷದವರೆಗೆ ಮಲಗಿಸಿ ತೆಗೆದರು.

ADVERTISEMENT

‘ಮೊಹರಂ ಸಂದರ್ಭದಲ್ಲಿ ಈ ಗ್ರಾಮದ ಬಹುತೇಕರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪಂಜಾಗಳಿಗೆ ಬೇಡಿಕೊಳ್ಳುತ್ತಾರೆ. ಅವು ಈಡೇರಿದಾಗ ಇಲ್ಲಿ ಕೆಂಡದಲ್ಲಿ ಹಾಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಈ ಸಂಪ್ರದಾಯ ಇಲ್ಲಿ ಬಹಳ ವರ್ಷಗಳಿಂದ ಇದೆ. ಇದರಲ್ಲಿ ಏನೂ ವಿಶೇಷ ಇಲ್ಲ’ ಎಂದು ಗ್ರಾಮಸ್ಥ ಗದಿಗೆಪ್ಪ ದೊಡ್ಡೂರ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.