ADVERTISEMENT

ವಿವಿಧೆಡೆ ಡಾ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:44 IST
Last Updated 7 ಡಿಸೆಂಬರ್ 2017, 9:44 IST
ಧಾರವಾಡದ ಕಲಾಭವನದ ಎದುರಿಗೆ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಡಾ. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನ ಆಚರಿಸಿದರು
ಧಾರವಾಡದ ಕಲಾಭವನದ ಎದುರಿಗೆ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಡಾ. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನ ಆಚರಿಸಿದರು   

ಧಾರವಾಡ: ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆ, ದಲಿತ ಸಂಘರ್ಷ ಸಮಿತಿ, ಬಿಜೆಪಿ ಜಿಲ್ಲಾ ಘಟಕ ಸೇರಿದಂತೆ ನಗರದ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.

ಜಿಲ್ಲಾಡಳಿತ: ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.

ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಅವರು ಡಾ. ಅಂಬೆಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಸ್.ಜಿ.ಕೊರವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ್ ಶಿಂತ್ರೆ, ಮುಖಂಡರಾದ ಲಕ್ಷ್ಮಣ ಬಕ್ಕಾಯಿ, ಮಹಾದೇವ ದೊಡ್ಡಮನಿ, ಗಿರೀಶ ಕಾಂಬಳೆ ಸೇರಿದಂತೆ ಅನೇಕರು ಇದ್ದರು. 

ADVERTISEMENT

ಡಿಎಸ್‌ಎಸ್‌: ಕಲಾಭವನದ ಎದುರಿಗೆ ಇರುವ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪುತ್ಥಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಮಹಾಪರಿನಿರ್ವಾಣ ದಿನ ಆಚರಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ದೊಡ್ಡಮನಿ, ರಾಜೇಶ ಕೋಟೆನ್ನವರ, ನಾರಾಯಣ ಮಾದರ, ಶಬ್ಬೀರ ಅತ್ತಾರ, ಹನಮಂತ ಮೊರಬ, ರೆಹಮಾನಸಾಬ ನಿಚ್ಚಣಕಿ ಇದ್ದರು.

ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆ: ಮರಾಠ ಕಾಲೊನಿ ರಸ್ತೆಯಲ್ಲಿರುವ ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಂಬೇಡ್ಕರ್‌ ಅವರ ಪುತ್ಥಳಿಗೆ ನಮನ ಸಲ್ಲಿಸಿ ಆಚರಿಸಿದರು.

ಬಿಜೆಪಿ ಜಿಲ್ಲಾ ಘಟಕ: ಸುಭಾಸ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿಯೂ ಆಚರಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ವಿಜಯಾನಂದ ಶೆಟ್ಟಿ, ರಾಜು ಕೊಟೆನ್ನವರ, ವಿಜಯಾನಂದ ಶೆಟ್ಟಿ, ರಾಮಚಂದ್ರ ಪೋದೊಡ್ಡಿ, ಮಂಜುಳಾ ಅಕ್ಕೂರ, ಸಂಜಯ ಕಪಟಕರ, ಯಲ್ಲಪ್ಪ ಅರವಾಳದ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ ಇದ್ದರು.

ಕಾಂಗ್ರೆಸ್ ಜಿಲ್ಲಾ ಘಟಕ: ಅಂಬೇಡ್ಕರ್‌  ಪುತ್ಥಳಿಗೆ ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಆಚರಿಸಿದರು.

ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಆನಂದ ಜಾಧವ, ಯಾಸಿನ್ ಹಾವೇರಿಪೇಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.