ADVERTISEMENT

ಸಾಧನೆ ಸ್ಮರಣೆ, ಶಿಕ್ಷಕರಿಗೆ ಸನ್ಮಾನ

ಹುಬ್ಬಳ್ಳಿಯ ವಿವಿಧೆಡೆ ಶಿಕ್ಷಕರ ದಿನಾಚರಣೆ, ಆದರ್ಶ ಮೈಗೂಡಿಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 15:22 IST
Last Updated 5 ಸೆಪ್ಟೆಂಬರ್ 2020, 15:22 IST
ಶಿಕ್ಷಕರ ದಿನದ ಅಂಗವಾಗಿ ಹುಬ್ಬಳ್ಳಿಯ ಅಮನ್ ಫೌಂಡೇಷನ್ ವತಿಯಿಂದ ನಿವೃತ್ತ ಶಿಕ್ಷಕ ಎಸ್.ವಿ. ಕರಿಯಂಕಣ್ಣವರ ಅವರನ್ನು ಶನಿವಾರ ಸನ್ಮಾನಿಸಲಾಯಿತು. ಫೌಂಡೇಷನ್‌ ಅಧ್ಯಕ್ಷ ನವೀದ್ ಮುಲ್ಲಾ, ಉಪಾಧ್ಯಕ್ಷ ರಫೀಕ್‌ ಚವ್ಹಾಣ, ನಿರ್ದೇಶಕ ಬಸವರಾಜ ಬೆಣಕಲ್ ಇದ್ದಾರೆ
ಶಿಕ್ಷಕರ ದಿನದ ಅಂಗವಾಗಿ ಹುಬ್ಬಳ್ಳಿಯ ಅಮನ್ ಫೌಂಡೇಷನ್ ವತಿಯಿಂದ ನಿವೃತ್ತ ಶಿಕ್ಷಕ ಎಸ್.ವಿ. ಕರಿಯಂಕಣ್ಣವರ ಅವರನ್ನು ಶನಿವಾರ ಸನ್ಮಾನಿಸಲಾಯಿತು. ಫೌಂಡೇಷನ್‌ ಅಧ್ಯಕ್ಷ ನವೀದ್ ಮುಲ್ಲಾ, ಉಪಾಧ್ಯಕ್ಷ ರಫೀಕ್‌ ಚವ್ಹಾಣ, ನಿರ್ದೇಶಕ ಬಸವರಾಜ ಬೆಣಕಲ್ ಇದ್ದಾರೆ   

ಹುಬ್ಬಳ್ಳಿ: ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಅಂಗವಾಗಿ ಶನಿವಾರ ನಗರದ ವಿವಿಧೆಡೆ ಶಿಕ್ಷಕರ ದಿನ ಆಚರಿಸಲಾಯಿತು.

ಸಿದ್ಧಾರೂಢ ನಗರದ ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಶಿವಮೂರ್ತಿ ದೇವನೂರ, ಪ್ರಮುಖರಾದ ಪರಮೇಶ್ವರ ಗುರುನಾಥಪ್ಪ ಬೈನವರ, ದೇವೇಂದ್ರ ಪಾಟೀಲ, ಮುಖ್ಯಶಿಕ್ಷಕಿ ಅಶ್ವಿನಿ ನೀಲಕಂಠಗೌಡ್ರ ಪಾಟೀಲ, ಅನಿಲ ಜಾಧವ, ಕುಮಾರಸ್ವಾಮಿ, ಮಂಜುನಾಥ, ಮೋಹನ, ಕೃಷ್ಣ, ನಾಗರಾಜ ದೊಡ್ಡಮನಿ ಅವರಿಗೆ ಸಿದ್ಧಾರೂಢರ ಗ್ರಂಥ ನೀಡಿ ಸನ್ಮಾನಿಸಲಾಯಿತು. ವೀರಸಂಗಪ್ಪ ಶ್ರೀಶೈಲಪ್ಪಾ ಸತ್ತಿಗೇರಿ ಇದ್ದರು.

ಮಠ: ಮೂರುಸಾವಿರ ಮಠದಲ್ಲಿ ವಿ.ಬಿ ಡಂಗನವರ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಮು ಮೂಲಗಿ, ಗೀತಾ ಚುಳಕಿ ಮತ್ತು ಎನ್‌ಪಿಎಸ್ ಉಣಕಲ್‌ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಸದಾನಂದ ಡಂಗನವರ, ಪ್ರತಿಷ್ಠಾನದ ಮುಖಂಡ ರಾಜಣ್ಣ ಪವಾರ, ಮಲ್ಲಿಕಾರ್ಜುನ ಕಳಸರಾಯ, ಅಮರೇಶ ಹಿಪ್ಪರಗಿ, ರವಿದಾಸ ದಾಸನೂರು, ಶಿಕ್ಷಕರಾದ ಆರ್. ಮಂಜಪ್ಪ, ಎಂ.ವಿ. ಅಜಗೊಂಡ, ಸಿ.ಎ. ಕುಲಕರ್ಣಿ, ಎಂ.ಎಚ್. ಗಾಣಿಗೇರ, ಸೋಮನಗೌಡ ಪಾಟೀಲ, ನವೀನ ಕುದುರಿ ಪಾಲ್ಗೊಂಡಿದ್ದರು.

ಸನ್ಮಾನ: ರೋಟರಿ ಕ್ಲಬ್‌ ಹುಬ್ಬಳ್ಳಿ ಸೌತ್‌ ವತಿಯಿಂದ ಶಿಕ್ಷಕ ನರೇಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಮಂಜುನಾಥ ಹೊಂಬಳ, ಕಾರ್ಯದರ್ಶಿ ಉದಯ ಬೆಂಡಿಗೇರಿ, ತುಳಸಿದಾಸ ಪಟೇಲ, ಕೇತನ ಮಹೇಶ್ವರಿ ಇದ್ದರು.

ಕೆಎಲ್‌ಇ: ಕೆಎಲ್‌ಇ ಸಂಸ್ಥೆಯ ಸ್ನಾತಕೋತ್ತರ ಶಿಕ್ಷಣ ವಿಭಾಗದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜಯಶ್ರೀ ಕುಂದಗೋಳಮಠ ಬೋಧಕ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಮುಳ್ಳಳ್ಳ, ಸಹಾಯಕ ಪ್ರಾಧ್ಯಾಪಕ ಬಿ.ವಿ. ಹಳೇಮನಿ, ಉಪನ್ಯಾಸಕರಾದ ಅಶ್ವಿನಿ ಕಲ್ಯಾಣಶೆಟ್ಟಿ, ಲಕ್ಷ್ಮಿ ಜಾಧವ , ಅರ್ಚನಾ ಪೂಜಾರ, ಪ್ರಿಯಾ ಬೀಳಗಿ, ವೀರೇಶ ಕಲಕೇರಿ, ಅಶೋಕ ಅಂಗಡಿ, ಪ್ರದೀಪ ಲಕ್ಷೆಟ್ಟಿ, ಕವಿತಾ ಕಲಕಬಂಡಿ, ಸಂಗಮೇಶ ವಾಂಗಿ ಭಾಗವಹಿಸಿದ್ದರು.

ಆದರ್ಶ ವಿಜ್ಞಾನ ಮಹಾವಿದ್ಯಾಲಯ: ಈ ಕಾಲೇಜಿನ ಪ್ರಾಚಾರ್ಯ ಎಂ.ಕೆ. ಬೆಳಗಲಿ ಮಾತನಾಡಿ ರಾಧಾಕೃಷ್ಣನ್‌ ಅವರ ಆದರ್ಶ ರೂಢಿಸಿಕೊಳ್ಳಲು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕ ಪ್ರೊ. ಎಸ್.ಬಿ. ಕುನ್ನೂರ, ಪ್ರೊ. ಬಿ.ಸಿ ಗೌಡ, ಪ್ರೊ. ಡ್ಯಾನಿಯಲ್ ಹೊಸಕೇರಿ, ಪ್ರೊ. ಬಿ.ಜಿ ಅಣ್ಣೀಗೇರಿ ಇದ್ದರು.

ಲೆಕ್ಕ ಪರಿಶೋಧಕರ ಸಂಸ್ಥೆ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಕರ ದಿನ ಆಚರಿಸಲಾಯಿತು. ಹುಬ್ಬಳ್ಳಿ ಶಾಖೆಯ ಚೇರ್ಮನ್‌ ಎಚ್‌.ಎನ್‌. ಅಡಿನವರ, ಶಿಕ್ಷಕ ವೇಣುಗೋಪಾಲ ಸಿ. ಗೋವಿಂದ, ಲೆಕ್ಕ ಪರಿಶೋಧಕರಾದ ಸುಭಾಷ ಪಾಟೀಲ, ಅಮಿತ್‌ ಬಾಬಾಜಿ ಸೇರಿದಂತೆ 100ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಶಿಕ್ಷಣದಿಂದ ವಿಕಾಸ: ಮೂರುಸಾವಿರ ಮಠದ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ., ಎನ್‌ಎಸ್‌ಎಸ್‌ ಮತ್ತು ಸಿಬ್ಬಂದಿ ಕಲ್ಯಾಣ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.‌

ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ವಿ.ಸಿ. ಸವದಿ ಮಾತನಾಡಿ ’ಶಿಕ್ಷಣವೆಂದರೆ ಕೇವಲ ಓದು ಅಲ್ಲ, ಮಾನವತೆಯ ವಿಕಾಸ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಅಶೋಕ ಮಳಗಿ, ಮಹೇಶ ಟೆಂಗಿನಕಾಯಿ, ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಅಂಗಡಿ, ಕಾಲೇಜಿನ ಸಿಬ್ಬಂದಿ ಜ್ಯೋತಿಲಕ್ಷ್ಮಿ ಡಿ.ಪಿ., ಶಿವಲೀಲಾ ಸಿದ್ದವೀರೆ, ಸುಪ್ರಿಯಾ ಮಲಶೆಟ್ಟಿ, ಸಿಸಿಲಿಯಾ ಡಿಕ್ರೂಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.