
ಧಾರವಾಡ: ‘ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ತರಬೇತಿ ಶಿಬಿರಗಳಲ್ಲಿ ರೈತರು, ಪಾಲ್ಗೊಳ್ಳಬೇಕು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿ ಅನ್ವಯಿಸಬೇಕು’ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ಹೇಳಿದರು.
ವಾಲ್ಮಿಯಲ್ಲಿ ಈಚೆಗೆ ನಡೆದ 40ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವಾಲ್ಮಿ ಕಾರ್ಯಚಟುವಟಿಕೆಗಳನ್ನುಇತರರಿಗೆ ತಿಳಿಸಬೇಕು. ಜಲ ನೆಲ ಸಂರಕ್ಷಣೆಯ ಯೋಧರಾಗಬೇಕು. ಜಲ ಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು ನಿರಂತರವಾಗಿ ರೈತರೊಂದಿಗೆ ಸಂಪರ್ಕದಲ್ಲಿರಬೇಕು ಎಂದರು.
ರೈತರು ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು. ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿ ಆರ್.ಎನ್.ರುದ್ರೇಶ ಮಾತನಾಡಿ, ‘ಪ್ಲಾಸ್ಟಿಕ್ ಮತ್ತು ರಸಾಯನಿಕಗಳಿಂದಾಗಿ ನೆಲ ಮತ್ತು ಜಲ ಮಲೀನವಾಗುತ್ತಿದೆ. ಅಂತರ್ಜಲ ಮಟ್ಟವು ಕುಸಿಯುತ್ತಿದೆ. ಸಹಜ ಕೃಷಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ರಸಾಯನಿಕ ಬಳಕೆ ಕಡಿಮೆ ಮಾಡಿ ಜಲ ನೆಲ ಸಂರಕ್ಷಣೆ ಪರಂಪರೆ ಮುಂದುವರೆಸಬೇಕು’ ಎಂದರು.
ವಾಲ್ಮಿ ನಿರ್ದೇಶಕ ಗಿರೀಶ್ ಎನ್. ಮರಡ್ಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಧಿವಿಜ್ಞಾನ ವಿ.ವಿ ನಿರ್ದೇಶಕ ಮಂಜುನಾಥ ಘಾಟೆ ಜೆ.ಆರ್.ಢವಳೆ, ರಾಜೇಂದ್ರ ಎಸ್. ಪೋದ್ದಾರ, ಬಿ.ವೈ.ಬಂಡಿವಡ್ಡರ, ವಿ.ಐ.ಬೆಣಗಿ, ಗೋಪಾಲ ಕಡೇಕೋಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.