ಧಾರವಾಡ: ಇಲ್ಲಿನ ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಯಾರ್ಕ್‍ಪೈರ್, ಬರ್ಕ್‍ಪೈರ್ ಹಂದಿಗಳು ಸಹಿತ ವಿವಿಧ ತಳಿ ಜಾನುವಾರುಗಳು ಇವೆ. 100ಕ್ಕೂ ಹೆಚ್ಚು ಜಾನುವಾರುಗಳಿವೆ. ಖಡಕನಾಥ ಕೋಳಿ, ಕಾವೇರಿ, ಸೋನಾಲಿ ಕೋಳಿ, ಖಿಲಾರಿ ಎತ್ತುಗಳ ಜೋಡಿ, ಎಮ್ಮೆ, ಕೋಣ, ಹೋರಿಗಳು, ಆಡು, ಟಗರುಗಳು,ಕುರಿಗಳು, ಕೋಳಿಗಳು ಮೇಳದಲ್ಲಿವೆ.
ಆಕಳು ತಳಿಗಳಲ್ಲಿ ಗಿರ್, ಥಾರಪಾರಕರ, ದೇವಣಿ, ಜರ್ಸಿ ಮಿಶ್ರತಳಿ, ಎಚ್.ಎಫ್.ದೇವಣಿ, ಎಮ್ಮೆಗಳಲ್ಲಿ ಧಾರವಾಡಿ, ಮುರಾ, ಜಾಫರಾಬಾದಿ ಸೇರಿ ವಿವಿಧ ತಳಿಯ ಕೋಣ, ಹೋರಿಗಳು, ಕೆಂಗೋರಿಯ ಕುರಿ, ತಲೆಚೇರಿ ತಳಿಯ ಆಡುಗಳು ಇವೆ. ಕೋಳಿಗಳ ವಿಭಾಗದಲ್ಲಿ ಟರ್ಕಿ ಕೋಳಿಯಿದ್ದರೆ, ಅದರ ಪಕ್ಕದಲ್ಲೇ ಖಡಕನಾಥ ಕೋಳಿಗಳು, ನಾಟಿ ಕೋಳಿಗಳೂ ಇವೆ. ಪಂಜರದಲ್ಲಿ ಸಾಕುವ ಬಗೆಬಗೆಯ ಬಣ್ಣದ ಪಕ್ಷಿಗಳಿವೆ.
‘ಮಧ್ಯಪ್ರದೇಶದ ಖಡಕನಾಥ ತಳಿಯ ಖಡಕನಾಥ ಕೋಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಕಪ್ಪು ಮಾಂಸ ಈ ತಳಿಯ ವಿಶೇಷ. ನಮ್ಮಲ್ಲಿ ಮರಿಗಳು ಸಿಗುತ್ತವೆ‘ ಎಂದು ಬೆಳಗಾವಿ ಜಿಲ್ಲೆಯ ಜಕಬಾಳದ ಸಂತೋಷ ಕೊಜಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಧಾರವಾಡ ತಾಲ್ಲೂಕಿನ ತೇಗೂರಿನಲ್ಲಿ ಹಂದಿ-ತಳಿ ಸಂವರ್ಧನಾ ಕೇಂದ್ರದ ಸುಧಾರಿತ ಯಾರ್ಕ್‍ಪೈರ್, ಬರ್ಕ್‍ಪೈರ್ ಹಂದಿ ತಳಿಗಳಿವೆ. ಯಾರ್ಕಷೈರ್ ಹಂದಿಯು ಇಂಗ್ಲೆಂಡ್ ಯಾರ್ಕ್ ಕೌಂಟಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಗಂಡು ಹಂದಿ 300 ರಿಂದ 350 ಹಾಗೂ ಹೆಣ್ಣು ಹಂದಿ 250-300 ಕೆಜಿ ಇದೆ ಎಂದು ಸಿಬ್ಬಂದಿ ತಿಳಿಸಿದರು.
ಕೆಂಗುರಿ (ಟೆಂಗುರಿ) ತಳಿ, ಯುಎಎಸ್ ಕುರಿ ತಳಿ (ಬನ್ನೂರ ಮಿಶ್ರ ತಳಿ)ಯ ಕುರಿಗಳ ಸಾಕಾಣಿಕೆ ಮಾಡುವ ಯೋಜನೆಯಲ್ಲಿ ಬಂದ ರಾಯಚೂರು, ಕಲಬುರಗಿ, ಕೊಪ್ಪಳ ಭಾಗದ ರೈತರು ಕುರಿಗಳ ಬಗ್ಗೆ ಸಿಬ್ಣಂದಿಯಿಂದ ಮಾಹಿತಿ ಪಡೆದರು. ಕುರಿಗಳ ಪಕ್ಕದಲ್ಲೇ ಬಿಳಿಬಣ್ಣದ ಕುದುರೆಯೊಂದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.ಕೆಲವರು ಕುದುರೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಕೃಷಿ ಮೇಳದಲ್ಲಿ ಜಾನುವಾರ ಪ್ರದರ್ಶನ ಉತ್ತಮವಾಗಿ ಆಯೋಜಿಸಿದ್ದು ಕೋಳಿ ಹಾಗೂ ಕುರಿ ಸಾಕಾಣಿಕೆ ಮಾಡುವ ಯೋಜನೆ ಇದೆ. ಇರ ಬಗ್ಗೆ ಮಾಹಿತಿ ತಿಳಿದಿಕೊಳ್ಳಲು ಅನುನೂಲವಾಯಿತುರಮೇಶ ಮೇಲಿನಮನಿ ಕೊಪ್ಪಳ
ಮತ್ಸ್ಯ ಪ್ರದರ್ಶನ ಆಕರ್ಷಣೆ
ಮೀನುಗಾರಿ ಇಲಾಖೆಯಿಂದ ಕಾಟ್ಲಾ ರೋಹು ಮೃಗಾಲ್ ಸಾಮಾನ್ಯ ಗೆಂಡೆ ಬೆಳ್ಳಿ ಗಂಡೆ ಹುಲ್ಲು ಗೆಂಡೆ ವಿದೇಶಿ ತಳಿಯ ಮೀನು `ಏಶಿಯನ್ ಸಿಲ್ವರ್ ಅರೋವಾನಾ ಜೀಬ್ರಾ ಸೇರಿದಂತೆ ವಿವಿಧ ತಳಿಯ ಮೀನುಗಳಿವೆ. ಅದರಲ್ಲೂ ಚೌಕಾಕಾರ ಮತ್ತು ಗೋಲಾಕಾರದ ಗಾಜಿನಲ್ಲಿರುವ ಆಲಂಕಾರಿಕ ಮೀನುಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.