ADVERTISEMENT

ಭ್ರಷ್ಟಾಚಾರ ತಡೆದು ದೇಶದ ಪ್ರಗತಿಗೆ ಕೈಜೋಡಿಸಿ: ಲೋಕಾಯುಕ್ತ ಇನ್ಸ್ಪೆಕ್ಟರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:49 IST
Last Updated 5 ನವೆಂಬರ್ 2025, 7:49 IST
ಅಳ್ನಾವರದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಸವರಾಜ ಬುದ್ನಿ ಮಾತನಾಡಿದರು
ಅಳ್ನಾವರದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಸವರಾಜ ಬುದ್ನಿ ಮಾತನಾಡಿದರು   

ಅಳ್ನಾವರ: ಸಾಕಷ್ಟು ಕಷ್ಟ ಪಟ್ಟು, ಹಲವಾರು ಸ್ಪರ್ಧೆ ಎದುರಿಸಿ ಗಿಟ್ಟಿಸಿಕೊಂಡ ಸರ್ಕಾರಿ ನೌಕರಿಯನ್ನು ಶ್ರದ್ದೆಯಿಂದ ನಿಭಾಯಿಸಬೇಕು. ಜನರಿಗೆ ಅನಕೂಲ ಆಗುವ ಕಾರ್ಯ ಮಾಡಬೇಕು. ಪ್ರಸ್ತುತ ಸಮಾಜ ಕಾಡುತ್ತಿರುವ ಭ್ರಷ್ಟಾಚಾರದ ಪೀಡುಗುಗಳನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಬಸವರಾಜ ಬದ್ನಿ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಭ್ರಷ್ಟಾಚಾರ ನಿಗ್ರಹ ಜಾಗ್ರತಿ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಭ್ರಷ್ಟಾಚಾರ ತಡೆದು ದೇಶದ ಉನ್ನತಿಗೆ ಅಧಿಕಾರಿ ವರ್ಗ ಕೈಜೊಡಿಸಬೇಕು ಎಂದರು.

ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆಯದಂತೆ ನೋಡಿಕೊಂಡು ಅರ್ಜಿಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು. ನೌಕರಿ ಜೊತೆ ದೇಶ ಮತ್ತು ಸಮಾಜದ ಏಳಿಗೆಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಲೋಕಾಯುಕ್ತ ಇನ್ಸ್‍ಪೆಕ್ಟರ್ ಜೆ.ಕರುಣೇಶಗೌಡ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ಶುದ್ದ ಹಸ್ತ ಹೊಂದಿರಬೇಕು. ಹಣದ ಮೋಹಕ್ಕೆ ಬಲಿಯಾಗಿ ಕಷ್ಟ ಪಡಬಾರದು, ಪ್ರಾಮಾಣಿಕತೆ, ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ ರೂಢಿಸಿಕೊಳ್ಳಲು ಭ್ರಷ್ಟಾಚಾರದಿಂದ ದೂರ ಇರಬೇಕು. ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗ ತೋರಿಸಬೇಕು. ಜನರ ನಂಬಿಕೆ ಗಟ್ಟಿಗೊಳಿಸಲು ತಮಗೆ ನೀಡಿದ ಕಾರ್ಯವನ್ನು ಸಮರ್ಥವಾಗಿ ನಿಬಾಯಿಸಬೇಕು ಎಂದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ವೈಯಕ್ತಿಕ ನಡುವಳಿಕೆಯಲ್ಲಿ ನಿಷ್ಠೆ  ಪ್ರದರ್ಶಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಲಂಚವನ್ನು ಪಡೆಯುವುದಿಲ್ಲ ಎಂದು ಶಪಥ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರ ಕೆಲಸ ಮಾಡಬೇಕು ಎಂದರು.

ತಾಲ್ಲೂಕ ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಉತ್ತಮ ಗದಗಕರ, ರಾಘವೇಂದ್ರ ದೊಡ್ಡಮನಿ, ವಲಯ ಅರಣ್ಯಾಧಿಕಾರಿ ಶಕುಂತಲಾ ಬುಗಡಿ, ಪಿಎಸ್‍ಐ ಬಸವರಾಜ ಯದ್ದಲಗುಡ್ಡ, ಪಶು ವೈಧ್ಯಾಧಿಕಾರಿ ಡಾ.ಸುನೀಲ್ ಬನ್ನಿಗೋಳ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರವಿಚಂದ್ರ ಪಾಟೀಲ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

ಭ್ರಷ್ಟಾಚಾರ ತಡೆಯಲು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಪ್ರತಿಜ್ಞಾ ವಿಧಿ ಬೋದಿಸಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.