ADVERTISEMENT

ಪರಿಸರ ಸ್ನೇಹಿ ಬಣ್ಣ ಹಚ್ಚಿಕೊಂಡು ಜಾಗೃತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 2:31 IST
Last Updated 19 ಮಾರ್ಚ್ 2022, 2:31 IST
ಹೋಳಿ ಹುಣ್ಣಿಮೆ ಅಂಗವಾಗಿ ಕಲಘಟಗಿಯಲ್ಲಿ ಕಲ್ಮೇಶ ಸೊಬರದ ತನ್ನ ಮೈಮೇಲೆ ಪರಿಸರ ಬಣ್ಣಗಳ ಬಣ್ಣ ಹಚ್ಚಿಕೊಂಡು ಗಮನ ಸೆಳೆದರು
ಹೋಳಿ ಹುಣ್ಣಿಮೆ ಅಂಗವಾಗಿ ಕಲಘಟಗಿಯಲ್ಲಿ ಕಲ್ಮೇಶ ಸೊಬರದ ತನ್ನ ಮೈಮೇಲೆ ಪರಿಸರ ಬಣ್ಣಗಳ ಬಣ್ಣ ಹಚ್ಚಿಕೊಂಡು ಗಮನ ಸೆಳೆದರು   

ಕಲಘಟಗಿ: ಹೋಳಿಹುಣ್ಣಿಮೆ ಅಂಗವಾಗಿ ಯುವಕನೊಬ್ಬ ತನ್ನ ಮೈಮೇಲೆ ಪರಿಸರದ ಹೋಳಿ ಬಣ್ಣ ಹಚ್ಚಿಕೊಂಡು ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.

ಕಲಘಟಗಿಯ ಕಲ್ಮೇಶ ಸೊಬರದ ಎಂಬುವರು ಪರಿಸರ ಪ್ರೇಮಿಯಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಪರಿಸರ ಉಳಿಸಿ, ಬೆಳೆಸುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

‘ಈಗಿನ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಪರಿಸರ ಸಂರಕ್ಷಣೆ, ಪ್ರಾಣಿ ಜೀವ ಸಂಕುಲ ಉಳಿಯಲು ಎಲ್ಲರೂ ಸಸಿ ನೆಟ್ಟು ಪರಿಸರ ಬೆಳಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.