
ಧಾರವಾಡ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆ ಮತ್ತು ದೌರ್ಜನ್ಯ ಪ್ರಕರಣ ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗಂಡ ಪತ್ರಿಭಟನಾಕಾರರು ಬಾಂಗ್ಲಾ ದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಹಿಂದೂ ವ್ಯಕ್ತಿ ಖೋಖೋನ್ ದಾಸ್ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿವೆ. ಕೇಂದ್ರ ಸರ್ಕಾರ ಬಾಂಗ್ಲಾದೇಶದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕು. ಅಲ್ಲಿನ ಹಿಂದೂಗಳ ರಕ್ಷಣೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಲಕ್ಷ್ಮಣ ದೊಡ್ಡಮನಿ, ಚಂದ್ರು ಅಂಗಡಿ, ಮಂಜುನಾಥ ಸುತಗಟ್ಟಿ, ವಿರುಪಾಕ್ಷಯ್ಯ ಹುಬ್ಬಳ್ಳಿಮಠ, ಗಂಗಪ್ಪ ದೊಡ್ಡಮನಿ, ನಾರಾಯಣ ಮಾದರ, ಹನಮಂತ ಮೊರಬ, ಅಲ್ತಾಪ್ ಜಾಲೆಗಾರ, ಹರೀಶ ನಾಯಕ, ಮಣಿಕಂಠ ಹವಾಲ್ದಾರ ಪಾಲ್ಗೊಂಡಿದ್ದರು.