ADVERTISEMENT

ಧಾರವಾಡ: ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:03 IST
Last Updated 6 ಸೆಪ್ಟೆಂಬರ್ 2025, 5:03 IST
<div class="paragraphs"><p>ಶಿಕ್ಷಕ</p></div>

ಶಿಕ್ಷಕ

   

– ಗೆಟ್ಟಿ ಚಿತ್ರ

ಧಾರವಾಡ: ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ತಲಾ ಏಳು ಮಂದಿ ಆಯ್ಕೆಯಾಗಿದ್ದಾರೆ.

ಪ‍್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿ ಇಂತಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಶೀರ ಅಹಮದ್ ಬಳ್ಳಾರಿ (ಜನ್ನತ್‌ನಗರ, ಧಾರವಾಡ ಶಹರ), ಆರ್‌.ಡಿ.ಸಾವಳಗಿ (ತಡಕೋಡ, ಧಾರವಾಡ ಗ್ರಾಮೀಣ), ಸಮಿತ್ರಾ ವೈ.ಮಾದರ (ಸುಣ್ಣದಬಟ್ಟಿ, ಹುಬ್ಬಳ್ಳಿ ಶಹರ), ರಮೇಜಾಬಿ ಇಮಾಮಸಾಬ ಮೊರಬ (ಅಂಚಟಗೇರಿ, ಹುಬ್ಳಳ್ಳಿ ಗ್ರಾಮೀಣ), ಅನಿಲಕುಮಾರ ಟಿ.ಹುರಿಗೋಳ (ಗೌಳಿದಡ್ಡಿ ಕಲಘಟಗಿ), ಬಸವರಾಜ ಎನ್‌.ಹೊಸಳ್ಳಿ (ಕಳಸ, ಕುಂದಗೋಳ) ಹಾಗೂ ಮೊಹಮ್ಮದ್‌ ಅಲಿ ಎ.ಹುಬ್ಬಳ್ಳಿ (ಸೈದಾಪೂರ, ನವಲಗುಂದ)

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಲಲಿತಾ ಪಾಟೀಲ (ಎತ್ತಿನಗುಡ್ಡ, ಧಾರವಾಡ ಶಹರ), ದೇವೇಂದ್ರ ಎನ್‌.ಖಾನಾಪೂರ (ಕಡಬಗಟ್ಟಿ, ಧಾರವಾಡ ಗ್ರಾಮೀಣ), ಬಿ.ಬಿ.ಅಮೀನಾ ಎನ್‌.ಶಿರಹಟ್ಟಿ (ತಬೀಬಲ್ಯಾಂಡ, ಹುಬ್ಬಳ್ಳಿ ಶಹರ), ನಿಂಗಪ್ಪ ಫಕ್ಕಿರಪ್ಪ ಗೋನಾಳ (ಕೋಳಿವಾಡ ಹುಬ್ಬಳ್ಳಿ ಗ್ರಾಮೀಣ), ಬಸವರಾಜ ಎಂ.ಹೊನ್ನಿಹಳ್ಳಿ (ದ್ಯಾವರಕೊಂಡ, ಕಲಘಟಗಿ), ಅಕ್ಕಮಹಾದೇವಿ ಎನ್‌.ನೇಕಾರ (ಬೆಟದೂರ, ‌ಕುಂದಗೋಳ) ಹಾಗೂ ಪಿ.ವಿ.ಪೂಜಾರ (ಅಮರಗೋಳ ಕ್ರಾಸ್‌, ನವಲಗುಂದ).

ಪ್ರೌಢಶಾಲಾ ವಿಭಾಗ: ಎನ್‌.ವಿ.ಲತೀಫನವರ (ನವಲೂರ ಧಾರವಾಡ ಶಹರ), ಭಾರತಿ ರಂಗಪ್ಪ ಕೊಪ್ಪದ (ನರೇಂದ್ರ ಧಾರವಾಡ ಗ್ರಾಮೀಣ), ಅನ್ವರ್‌ಹುಸೇನ ಕಮಾಲ್‌ ಸನದಿ (ನಾಗಶೆಟ್ಟಿಕೊಪ್ಪ ಹುಬ್ಬಳ್ಳಿ ಶಹರ), ಶೋಭಾ ಎಲಿಗಾರ (ಕೋಳಿವಾಡ ಹುಬ್ಬಳ್ಳಿ ಗ್ರಾಮೀಣ), ಅಕ್ಕಪ್ಪ ಸಿ.ಕುರಣಿ (ಬೆಲವಂತರ, ಕಲಘಟಗಿ), ಬಸವನಗೌಡ ಎಲ್‌.ಪಾಟೀಲ (ತರ್ಲಘಟ್ಟ, ಕುಂದಗೋಳ) ಹಾಗೂ ದೀಪಕ್‌ ಎಂ.ದೇಸಾಯಿ (ಟಿಜಿಟಿ ಬಳ್ಳೂರ, ನವಲಗುಂದ).

ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಆವರಣ ಸನ್ನಿಧಿ ಕಲಾ ಭವನದಲ್ಲಿ ಸೆ.6ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.