ADVERTISEMENT

ಧಾರವಾಡ: | ಬಿಆರ್‌ಟಿಎಸ್‌ ಸ್ಮಾರ್ಟ್‌ ಕಾರ್ಡ್‌: ಗಂಟೆಗಟ್ಟಲೇ ಕಾಯುವ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:20 IST
Last Updated 4 ಜುಲೈ 2025, 15:20 IST
ಧಾರವಾಡದ ಪಾಲಿಕೆ ಕಚೇರಿ ಸಮೀಪದ ಬಿಆರ್‌ಟಿಎಸ್‌ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಕೌಂಟರ್‌ ಬಳಿ ನಿಂತಿದ್ದ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ
ಧಾರವಾಡದ ಪಾಲಿಕೆ ಕಚೇರಿ ಸಮೀಪದ ಬಿಆರ್‌ಟಿಎಸ್‌ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಕೌಂಟರ್‌ ಬಳಿ ನಿಂತಿದ್ದ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ   

ಧಾರವಾಡ: ನಗರದ ಬಿಆರ್‌ಟಿಎಸ್‌ ‘ಟರ್ಮಿನಲ್‌’ನಲ್ಲಿ ‘ಸ್ಮಾರ್ಟ್‌ ಕಾರ್ಡ್‌’ಗಳನ್ನು ಒಂದೇ ಕೌಂಟರ್‌ನಲ್ಲಿ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಕಾರ್ಡ್‌ ಪಡೆಯಲು ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ಇದೆ.

ಪಿಯುಸಿ, ಡಿಪ್ಲೊಮಾ, ಐಟಿಐ ಮೊದಲಾದ ಕೋರ್ಸ್‌ಗಳ ವಿದ್ಯಾರ್ಥಿಗಳು ಕಾರ್ಡ್‌ ಪಡೆಯಲು ತರಗತಿ ಬಿಟ್ಟು ಬಿಆರ್‌ಟಿಎಸ್‌ ‘ಟರ್ಮಿನಲ್‌ಗೆ ಅಲೆಯುವಂತಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನ, ಸಂಜೆವರೆಗೆ ಕಾದು ಕಾರ್ಡ್‌ ಪಡೆಯುವಂತಾಗಿದೆ.

ಆಧಾರ್‌ ಕಾರ್ಡ್‌, ಫೋಟೊ, ಇತರ ದಾಖಲೆ, ಶುಲ್ಕ (₹ 150) ಪಡೆದು ‘ಸ್ಮಾರ್ಟ್‌ ಕಾರ್ಡ್‌’ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಕಾರ್ಡ್‌ ವಿತರಣೆ ವಿಳಂಬವಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ದೂರು.

ADVERTISEMENT

‘ಕಾರ್ಡ್‌ ಪಡೆಯಲು ಬಹಳಷ್ಟು ಮಂದಿ ಸಾಲಿನಲ್ಲಿ ನಿಂತಿರುತ್ತಾರೆ. ಒಂದು ಕಾರ್ಡ್‌ ನೀಡಲು 10 ನಿಮಿಷ ಹಿಡಿಯುತ್ತದೆ. ನಾಲ್ಕು ದಿನಗಳಿಂದ ಕೌಂಟರ್‌ನಲ್ಲಿ ದಟ್ಟಣೆ ಹೆಚ್ಚು ಇದೆ. ತಾತ್ಕಾಲಿಕವಾಗಿಯಾದರೂ ಇನ್ನೆರಡು ಕೌಂಟರ್ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಡಿಪ್ಲೊಮಾ ವಿದ್ಯಾರ್ಥಿ ಮೃತ್ಯುಂಜಯ ಅಳಗವಾಡಿ ಒತ್ತಾಯಿಸಿದರು.

ಕ್ಯಾಟರಿಜ್‌ ಕೊರತೆಯಿಂದ ಸ್ಮಾರ್ಟ್‌ ಕಾರ್ಡ್‌ ವಿತರಣೆ ಸ್ವಲ್ಪ ನಿಧಾನವಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಅಗತ್ಯವಿದ್ದರೆ ಇನ್ನೊಂದು ಕೌಂಟರ್‌ ವ್ಯವಸ್ಥೆ ಮಾಡಲಾಗುವುದು.
ಸಾವಿತ್ರಿ ವ್ಯವಸ್ಥಾಪಕ ನಿರ್ದೇಶಕಿ ಬಿಆರ್‌ಟಿಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.