ADVERTISEMENT

ಸಂಭ್ರಮದಲ್ಲಿ ಕ್ರೈಸ್ತ ಸಮುದಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 4:08 IST
Last Updated 25 ಡಿಸೆಂಬರ್ 2021, 4:08 IST
ಹುಬ್ಬಳ್ಳಿ ಕೇಶ್ವಾಪುರದ ಸೇಂಟ್ ಜೋಸೆಫ್ ಕ್ಯಾಥೋಲಿಕ್‌ ಚರ್ಚ್‌ ಅನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ ಕೇಶ್ವಾಪುರದ ಸೇಂಟ್ ಜೋಸೆಫ್ ಕ್ಯಾಥೋಲಿಕ್‌ ಚರ್ಚ್‌ ಅನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಕೋವಿಡ್‌ನಿಂದ ಎರಡು ವರ್ಷ ಕ್ರಿಸ್‌ಮಸ್‌ ಕಳೆಗುಂದಿತ್ತು. ಪ್ರಸ್ತುತ ವರ್ಷ ಸಂಭ್ರಮಕ್ಕೆ ತುಸು ಪೂರಕವಾದ ವಾತಾವರಣವಿದ್ದು, ಕ್ರೈಸ್ತ ಸಮುದಾಯದವರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ನಗರದಲ್ಲಿನ ಚರ್ಚ್‌ಗಳೆಲ್ಲ ಬಣ್ಣ, ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿ
ಸುತ್ತಿವೆ. ಕ್ರಿಸ್‌ಮಸ್ ಟ್ರೀಗಳಿಗೆ ದೀಪ ಅಳವಡಿಸಲಾಗಿದೆ. ಯೇಸುವಿನ ಜನ್ಮ, ಪವಾಡ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತರು ಮನೆಗಳ ಎದುರು ಆಕಾಶಬುಟ್ಟಿ ಅಳವಡಿಸಿದ್ದಾರೆ. ಮಕ್ಕಳಿಗೆ ಸಂತಾಕ್ಲಾಸ್ ವೇಷಭೂಷಣ ತೊಡಿಸಿ, ಉಡುಗೊರೆ ನೀಡುವ ಕಾರ್ಯ
ಕ್ರಮಗಳು ಚರ್ಚ್‌ನಲ್ಲಿ ನಡೆಯುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮ, ದೃಶ್ಯ ರೂಪಕ, ನಾಟಕಗಳು ಸಹ ನಡೆದವು. ಕೇಕ್, ಕ್ಯಾಲೆಂಡರ್ ವಿತರಣೆ ಮಾಡಲಾಯಿತು. ಶನಿವಾರ ನಗರದ ವಿವಿಧ ಚರ್ಚ್‌ಗಳಲ್ಲಿ ಯೇಸು ಆರಾಧನೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.