ADVERTISEMENT

ಹುಬ್ಬಳ್ಳಿ: ಮೊದಲ ಓಟದಲ್ಲಿಯೇ ಹಳಿತಪ್ಪಿದ ಪುಟಾಣಿ ರೈಲು

ಕೇಂದ್ರ ಸಚಿವ ಜೋಶಿ, ಶೆಟ್ಟರ್ ಪ್ರಯಾಣಿಸುತ್ತಿದ್ದ ರೈಲು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 8:48 IST
Last Updated 30 ಏಪ್ರಿಲ್ 2022, 8:48 IST
ರೈಲು ಹಳಿತಪ್ಪಿರುವ ದೃಶ್ಯ
ರೈಲು ಹಳಿತಪ್ಪಿರುವ ದೃಶ್ಯ   

ಹುಬ್ಬಳ್ಳಿ: ಇಲ್ಲಿನ ಮಹಾತ್ಮಾಗಾಂಧಿ ಉದ್ಯಾನದಲ್ಲಿ ಶನಿವಾರ ಚಾಲನೆ ನೀಡಲಾದ ಪುಟಾಣಿ ರೈಲು ಮೊದಲ ಓಟದಲ್ಲಿಯೇ ಹಳಿತಪ್ಪಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ರೈಲಿನಲ್ಲಿ ಇದ್ದರು.

ಇಂದಿರಾ ಗಾಜಿನ ಮನೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮುಕ್ತಾಯಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜೋಶಿ ಚಾಲನೆ ನೀಡಿ, ಪುಟಾಣಿ ರೈಲಿನಲ್ಲಿ ಪ್ರಯಾಣಿಸಿದ್ದರು. ಐದು ಬೋಗಿಯಿರುವ ರೈಲಿನ ಮೊದಲ ಬೋಗಿಯಲ್ಲಿ ಜೋಶಿ ಮತ್ತು ಗಣ್ಯರು ಪ್ರಯಾಣಿಸಿದ್ದರು. ನೂರು ಮೀಟರ್ ದೂರವಷ್ಟೇ ರೈಲು ಕ್ರಮಿಸಿದೆ, ಆಗ ಮೂರನೇ ಬೋಗಿಯ ಗಾಲಿ ಕಂಬಿ ಬಿಟ್ಟು ಕೆಳಗೆ ಜಾರಿದೆ.

ಕೆಲ ಕ್ಷಣ ಆತಂಕದ ವಾತರಣ ನಿರ್ಮಾಣವಾಗಿತ್ತು. ಆಗ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸಚಿವ ಜೋಶಿ ಮತ್ತು ಇತರರನ್ನು ರೈಲಿನಿಂದ ಕೆಳಗಿಳಿಸಿದರು. ₹4.2 ಕೋಟಿ ವೆಚ್ಚದಲ್ಲಿ ಪುಟಾಣಿ ರೈಲು ಯೋಜನೆ ಅಭಿವೃದ್ಧಿ ಪಡಿಸಲಾಗಿದೆ.

ADVERTISEMENT

ನಾಲ್ಕು ಹವಾನಿಯಂತ್ರಿತ ಬೋಗಿಗಳು, ಎರಡು ಎಂಜಿನ್ ಒಳಗೊಂಡಿರುವ ರೈಲಿನಲ್ಲಿ 48 ವಯಸ್ಕರು ಅಥವಾ 60 ಮಕ್ಕಳು ಪ್ರಯಾಣಿಸಬಹುದಾಗಿದೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂದು ಇನ್ನೂ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.