ADVERTISEMENT

ಧಾರ್ಮಿಕ ಭಾವನೆಗೆ ಧಕ್ಕೆ: ದೂರು

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:37 IST
Last Updated 15 ಮೇ 2025, 13:37 IST
FIR.
FIR.   

ಕುಂದಗೋಳ: ತಾಲ್ಲೂಕಿನ ಬಸಾಪೂರ ಗ್ರಾಮದಲ್ಲಿ ದ್ಯಾಮವ್ವ ದೇವಿ ಗುಡಿಯ ಪೂಜಾ ಸ್ಥಳವನ್ನು ಧ್ವಂಸಗೊಳಿಸಿ ಹಾಗೂ ಪರಿಶಿಷ್ಟ ಜಾತಿಯ ಜನರು ಹೋಗಿ ಬರುವ ದಾರಿಗೆ ಮುಳ್ಳು ಹಾಕಿದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗ್ರಾಮದ ಹನುಮಂತಪ್ಪ ಜಗತಾಪ ಎಂಬುವವರು ಪೂಜಾ ಸ್ಥಳ ಧ್ವಂಸಗೊಳಿಸಿಸುವ ಉದ್ದೇಶದಿಂದ ದೇವಸ್ಥಾನದ ಮೇಲಿನ ಕುಂಬಿಯನ್ನು ಮಂಗಳವಾರ ಒಡೆದಿದ್ದಾರೆ. ಇದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ. ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯ ಜನರು ಹೋಗಿ ಬರುವ ದಾರಿಗೆ ಮುಳ್ಳು ಕಂಟಿಗಳನ್ನು ಹಾಕಿ ದಾರಿ ಬಂದ್ ಮಾಡಿದ್ದಾರೆ’ ಎಂದು ಬಸವರಾಜ ಹುಲಿಗೆಪ್ಪ ಹರಿಜನ ಅವರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT