ADVERTISEMENT

ನಾಯಕತ್ವ ಇಲ್ಲದ ಪಕ್ಷ ಕಾಂಗ್ರೆಸ್‌: ಶೆಟ್ಟರ್ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 10:02 IST
Last Updated 24 ಅಕ್ಟೋಬರ್ 2019, 10:02 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಹುಬ್ಬಳ್ಳಿ: ‘ಕಾಂಗ್ರೆಸ್‌ ಪಕ್ಷಕ್ಕೆ ದೇಶದಲ್ಲಿ ನಾಯಕತ್ವವೇ ಇಲ್ಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಸರಿಸಮಾನಕ್ಕೆ ನಿಲ್ಲುವ ರಾಷ್ಟ್ರಮಟ್ಟದ ನಾಯಕರು ಆ ಪಕ್ಷದಲ್ಲಿಲ್ಲ. ವಿಸರ್ಜಿಸಬೇಕಾದ ಮಟ್ಟಕ್ಕೆ ಆ ಪಕ್ಷ ತಲುಪಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘60 ವರ್ಷ ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್‌ನವರು, ತಮ್ಮ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸವನ್ನು ಮಾಡಲೇ ಇಲ್ಲ. ವಿರೋಧ ಪಕ್ಷದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದೂ ಗೊತ್ತಿಲ್ಲ. ಹಾಗಾಗಿ, ಪಕ್ಷ ದಿನೇ ದಿನೇ ನೆಲ ಕಚ್ಚುತ್ತಿದೆ’ ಎಂದರು.

‘ಐ.ಟಿ ದಾಳಿ ಹಿಂದೆ ಬಿಜೆಪಿ ಇಲ್ಲ. ಇಲಾಖೆ ತನಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ದಾಳಿ ನಡೆಸುತ್ತದೆ. ಅದನ್ನು ಕಾಂಗ್ರೆಸ್‌ನವರು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ’ ಎಂದ ಅವರು, ‘ಶಾಸಕ ಜಿ. ಪರಮೇಶ್ವರ್ ಅವರಂತೆ ಐ.ಟಿ ದಾಳಿಯನ್ನು ಕಾನೂನಾತ್ಮಕವಾಗಿಯೇ ಎದುರಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.