
ಹುಬ್ಬಳ್ಳಿ: ‘ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರ ಹೆಸರನ್ನು ಘೋಷಿಸಲಾಗಿದ್ದು, ನನಗೆ ಅನ್ಯಾಯವಾಗಿದೆ’ ಎಂದು ಟಿಕೆಟ್ ಆಕಾಂಕ್ಷಿ ಆರ್.ಎಂ.ಕುಬೇರಪ್ಪ ಹೇಳಿದರು.
‘ಬಿಜೆಪಿಯಿಂದ ಕಾಂಗ್ರೆಸ್ ಬಂದಿರುವ ಮೋಹನ್ ಲಿಂಬಿಕಾಯಿ ಅವರು ಅಹಿಂದ ವರ್ಗ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿಲ್ಲ. ಅವರು ಯಾರು ಎಂಬುದು ಕಾರ್ಯಕರ್ತರು, ಮುಖಂಡರಿಗೆ ಗೊತ್ತಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಲಿಂಬಿಕಾಯಿ ಅವರಿಗೆ ನೀಡಿರುವ ಟಿಕೆಟ್ ರದ್ದುಪಡಿಸಿ, ಈ ಕ್ಷೇತ್ರದ ಅಹಿಂದ ಸಮುದಾಯದವರಿಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿಯಲ್ಲಿ ಫೆಬ್ರುವರಿ 13ರಂದು ಸರ್ಕಾರದ ಸಾವಿರ ದಿನಗಳ ಸಮಾವೇಶ ಆಯೋಜಿಸಿದ್ದು, ಅದಕ್ಕೆ ಪರ್ಯಾಯವಾಗಿ ಅದೇ ದಿನ ಸಾವಿರ ಅಹಿಂದ ಹೋರಾಟಗಾರರ ಸಮಾವೇಶ ಹಾವೇರಿಯಲ್ಲಿಯೇ ಹಮ್ಮಿಕೊಳ್ಳುತ್ತೇವೆ’ ಎಂದರು.
ಕ್ಷೇತ್ರ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ನನ್ನ ಬೆಂಬಲಿಗರ ಜತೆ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ನಿರ್ಧರಿಸುತ್ತೇನೆಆರ್.ಎಂ. ಕುಬೇರಪ್ಪ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.