ADVERTISEMENT

ಸಾವಿನಲ್ಲೂ ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:32 IST
Last Updated 27 ಸೆಪ್ಟೆಂಬರ್ 2020, 15:32 IST
ಫರಿದ್ದೀನ್ ಇಮಾಮಸಾಬ್ ಪಠಾಣ 
ಫರಿದ್ದೀನ್ ಇಮಾಮಸಾಬ್ ಪಠಾಣ    

ಕುಂದಗೋಳ: ಗಂಡನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಸಿಮರಳಿ ಮನೆಗೆ ಬರುವಷ್ಟರಲ್ಲಿ ಹೆಂಡತಿ ಕೂಡ ಹೃದಯಘಾತದಿಂದ ಮೃತಪಟ್ಟ ಘಟನೆಪಟ್ಟಣದ ಕುಂಬಾರ ಓಣಿಯಲ್ಲಿ ಭಾನುವಾರ ಜರುಗಿದೆ.

ಬೆಳಿಗ್ಗೆ6 ಗಂಟೆಗೆ ಫರಿದ್ದೀನ್ ಇಮಾಮಸಾಬ್ ಪಠಾಣ (74) ಹೃದಯಾಘಾತದಿಂದ ನಿಧನರಾಗಿದ್ದರು. ಅಂಜುಮನ್‌ ಖಬರಸ್ತಾನದಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿ ಬರುವಷ್ಟರಲ್ಲಿ ಫರದ್ದೀನ್‌ ಅವರ ಪತ್ನಿಹುಸೇನಬೀ ಪಠಾಣ (70) ಹೃದಯಾಘಾತವಾಗಿಮೃತಪಟ್ಟಿದ್ದಾರೆ. ಈ ದಂಪತಿಗೆ ನಾಲ್ವರು ಪುತ್ರರು ಹಾಗು ಪುತ್ರಿ ಇದ್ದಾರೆ.50 ವರ್ಷಗಳಿಂದ ಸಂಸಾರದ ಬಂಡಿ ಸಾಗಿಸಿದ ಈ ದಂಪತಿಸಾವಿನಲ್ಲೂ ಒಂದಾದರು.ಒಂದೇ ದಿನ ಇಬ್ಬರ ಮರಣದಿಂದಾಗಿ ಕುಟುಂಬದವರ ರೋದನೆ ಮುಗಿಲು ಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT