ADVERTISEMENT

ಹುಬ್ಬಳ್ಳಿ: ಜನವರಿ 8ರಿಂದ 587 ಮಕ್ಕಳಿಗೆ ಕೋವಿಡ್‍ ದೃಢ

ಗಂಭೀರ ಪ್ರಕರಣಗಳಿಲ್ಲ: ಮನೆಯಲ್ಲೇ ಚಿಕಿತ್ಸೆ; ಆಸ್ಪತ್ರೆಯಲ್ಲೂ ವ್ಯವಸ್ಥೆ

ಗೋವರ್ಧನ ಎಸ್‌.ಎನ್‌.
Published 19 ಜನವರಿ 2022, 11:11 IST
Last Updated 19 ಜನವರಿ 2022, 11:11 IST
ವೈರಸ್‌–ಪ್ರಾತಿನಿಧಿಕ ಚಿತ್ರ
ವೈರಸ್‌–ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಕೋವಿಡ್‍ ಮೂರನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ 587 ಮಕ್ಕಳಲ್ಲಿ ಕೋವಿಡ್‍ ದೃಢಪಟ್ಟಿದೆ.

ಜ.8ರಿಂದ ಈವರೆಗೆ ಜಿಲ್ಲೆಯ 8,831 ಮಕ್ಕಳನ್ನು ಕೋವಿಡ್‍ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 587 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಬಾಧಿತ ಮಕ್ಕಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಂಬುದು ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿ.

ಮನೆಯಲ್ಲೇ ಚಿಕಿತ್ಸೆ: ‘ಕೋವಿಡ್‍ ಬಾಧಿತ ಮಕ್ಕಳಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಆದರೂ, ಹುಬ್ಬಳ್ಳಿಯ ಕಿಮ್ಸ್‌ನ ಐಸಿಯುನಲ್ಲಿ 20 ಹಾಸಿಗೆ ಹಾಗೂ ಆಮ್ಲಜನಕಯುಕ್ತ 80 ಹಾಸಿಗೆಗಳನ್ನು ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಮೊದಲ ಅಲೆಯ ವೇಳೆ 65 ಮಕ್ಕಳು ಕೋವಿಡ್‍ ಬಾಧಿತರಾಗಿದ್ದರೆ, ಇತರೆ ಆರೋಗ್ಯ ಸಮಸ್ಯೆಯಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ 20 ಮಕ್ಕಳು ಚಿಕಿತ್ಸೆ ಪಡೆದು, ಮನೆಗೆ ತೆರಳಿದ್ದರು’ ಎಂದು ಕಿಮ್ಸ್‌ ಮಕ್ಕಳ ವಿಭಾಗದ ಮುಖ್ಯಸ್ಥ ಪ್ರಕಾಶ ವಾರಿ ತಿಳಿಸಿದರು.

ADVERTISEMENT

‘ವಾತಾವರಣ ವ್ಯತ್ಯಾಸದಿಂದ ಶೀತ, ಕೆಮ್ಮು, ಜ್ವರದ ಸಮಸ್ಯೆಯಿಂದ ಹೆಚ್ಚಿನ ಮಕ್ಕಳು ಬಳಲುತ್ತಿದ್ದಾರೆ. ಅಂಥವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಮಕ್ಕಳು ನ್ಯಮೋನಿಯಾದಿಂದ ಬಳಲುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೋವಿಡ್‍ ನಿಮಯಗಳ ಪಾಲನೆ, ಎರಡು ಡೋಸ್‍ ಲಸಿಕೆ ಪಡೆಯುವುದು, ಪೌಷ್ಟಿಕ ಆಹಾರ ಸೇವನೆ, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ವೈದ್ಯರನ್ನು ಕಾಣಬೇಕು. ಪಾಲಕರು ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.