ಹುಬ್ಬಳ್ಳಿ: ರಾಯಚೂರಿನ ದರ್ವೇಶ ಗ್ರುಪ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸುಜಾ ಪತ್ತೆ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಗೆ ಬಂದ ಸಿಐಡಿ ತಂಡ, ಆರೋಪಿ ಸಂಬಂಧಿ ಮನೆಯಲ್ಲಿ ಶೋಧ ಕಾರ್ಯ ನಡೆಸಿತು.
ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಐದು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ಅವರು, ಹಳೇಹುಬ್ಬಳ್ಳಿಯಲ್ಲಿರುವ ಮೊಹಮ್ಮದ್ ಸುಜಾ ಅವರ ಪತ್ನಿಯ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಎರಡು ಗಂಟೆಗೂ ಅಧಿಕ ಕಾಲ ಅಲ್ಲಿಯೇ ಇದ್ದು, ಆರೋಪಿಯ ಮಾಹಿತಿ ಕಲೆಹಾಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ಹೆಚ್ಚಿನ ಲಾಭ, ಹೆಚ್ಚಿನ ಬಡ್ಡಿ ಆಸೆ ಮತ್ತು ವಿವಿಧ ಬಗೆಯ ಆಮಿಷ ನೀಡಿ ನೂರಾರು ಮಂದಿಯಿಂದ ದರ್ವೇಶ್ ಗ್ರುಪ್ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡಿತ್ತು. ನಂತರ ಕಂಪನಿ ಬಡ್ಡಿ, ಅಸಲು ನೀಡದೆ ವಂಚಿಸಿರುವ ಆರೋಪ ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.