ನವಲಗುಂದ: ಪಟ್ಟಣದ ಮುದಿಗೌಡ್ರ ಪ್ಲಾಟ್ ನಿವಾಸಿ ನಿವೃತ್ತ ಶಿಕ್ಷಕ, ಕ್ರೀಡಾಪಟು ಮಲ್ಲಪ್ಪ ಬಸಪ್ಪ ಗಂಗಣ್ಣವರ (92) ಅನಾರೋಗ್ಯದ ಕಾರಣ ಗುರುವಾರ ರಾತ್ರಿ ನಿಧನರಾದರು.
ಮೃತರ ಇಚ್ಛೆಯ ಮೇರೆಗೆ ಮೃತದೇಹವನ್ನು ಹುಬ್ಬಳ್ಳಿಯ ಕೆಎಂಸಿಎಂಆರ್‌ಗೆ ದೇಹದಾನ ಮಾಡಲಾಗಿದೆ.
ಮಲ್ಲಪ್ಪರವರ ಮಗ ಮಲ್ಲಿಕಾರ್ಜುನ ಮಲಪ್ಪ ಗಂಗಣ್ಣವರ ಕುಟುಂಬಸ್ಥರು ಹಾಗೂ ಬಸವರಾಜ ಚಕ್ರಸಾಲಿ, ಎಸ್.ವಿ.ಮುದಿಗೌಡ್ರ, ಎಲ್.ಬಿ. ಪಾಟೀಲ್, ಎಂ.ಎಸ್.ರಾಮನಗೌಡ್ರ, ಬಸಪ್ಪ ಮರಲಕ್ಕಣ್ಣವರ ಚಮನಸಾಬ ಬಡೇಕಾನ ಇವರ ಸಮಕ್ಷಮದಲ್ಲಿ ಶುಕ್ರವಾರ ದೇಹದಾನ ಮಾಡಲಾಯಿತು.
ವೈದ್ಯ ಸಂಗಮೇಶ ಕಲಹಾಳ, ಪಾರಮ್ಮ ನಾಗಠಾಣ, ರುದ್ರಪ್ಪ ಸೌದತ್ತಿ, ವಿದ್ಯಾವತಿ ಬಡಿಗೇರ ಸೇರಿ ಆಸ್ಪತ್ರೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.