ADVERTISEMENT

ಹೆಸ್ಕಾಂ ಉಪವಿಭಾಗ ಕಚೇರಿ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:06 IST
Last Updated 26 ಸೆಪ್ಟೆಂಬರ್ 2024, 16:06 IST
ಕೊಲ್ಹಾರ ಪಟ್ಟಣದಲ್ಲಿ ರೖತ ಭಾರತ ಪಕ್ಷದಿಂದ ಹೆಸ್ಕಾಂ ಸ್ವಚ್ಛತಾ ಅಭಿಯಾನದ ಪಾದಯಾತ್ರೆ ನಡೆಯಿತು
ಕೊಲ್ಹಾರ ಪಟ್ಟಣದಲ್ಲಿ ರೖತ ಭಾರತ ಪಕ್ಷದಿಂದ ಹೆಸ್ಕಾಂ ಸ್ವಚ್ಛತಾ ಅಭಿಯಾನದ ಪಾದಯಾತ್ರೆ ನಡೆಯಿತು   

ಕೊಲ್ಹಾರ: ‘ಸರ್ಕಾರದ ಉತ್ತಮ ಕೆಲಸಗಳನ್ನು ರೈತರು ಸ್ವಾಗತಿಸಬೇಕು. ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದರೆ ಖಂಡಿಸಬೇಕು. ಆಗ ರೈತರ ಬದುಕು ಹಸನಾಗಲು ಸಾಧ್ಯ’ ಎಂದು ಪ್ರಗತಿಪರ ರೈತ ಸಿದ್ದು ಬಾಲಗೊಂಡ ಹೇಳಿದರು.

ಕೊಲ್ಹಾರ ಪಟ್ಟಣದಲ್ಲಿ ರೈತ ಭಾರತ ಪಕ್ಷದಿಂದ ಗುರುವಾರ ನಡೆದ ಹೆಸ್ಕಾಂ ಸ್ವಚ್ಛತೆ ಅಭಿಯಾನ ಪಾದಯಾತ್ರೆಯಲ್ಲಿ ಮಾತನಾಡಿದರು.

ಪಾದಯಾತ್ರೆಯಲ್ಲಿ ಸಿ.ಎಂ ಗಣಕುಮಾರ ಮಾತನಾಡಿ, ‘ನಮ್ಮ ಭಾಗದಲ್ಲಿ ಸರ್ಕಾರ ನೂತನ ಹೆಸ್ಕಾಂ ಉಪವಿಭಾಗ ಕಚೇರಿ ಶೀಘ್ರದಲ್ಲೇ ಪ್ರಾರಂಭಿಸಿ, ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕಲ್ಲಿನಾಥ ದೇವರು ಮಾತನಾಡಿ, ‘ರೈತರಿಗೆ ನೀರಿನ ಅಗತ್ಯವಿದೆ. ಸರ್ಕಾರ ಶೀಘ್ರ ಪಂಪ್‌ಸೆಟ್, ಪಂಪ್‌ಸೆಟ್‌ಗೆ ಆರ್‌ಆರ್ ನಂಬರ್ ನೀಡಬೇಕು. ಹೆಚ್ಚು ಅವಧಿ ವಿದ್ಯುತ್ ಪೂರೈಸಬೇಕು’ ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ‘ರೈತರು ಟಿ.ಸಿಗಾಗಿ ಅರ್ಜಿ ಸಲ್ಲಿಸಿದರೆ 48 ಗಂಟೆಯಲ್ಲಿ ಇಲಾಖೆ ತನ್ನ ಕಾರ್ಯ ಮಾಡುತ್ತದೆ. ರೈತರು ಅದರ ಉಪಯೋಗ ಪಡೆಯಿರಿ’ ಎಂದು ಸಲಹೆ ನೀಡಿದರು.

ಕೊಲ್ಹಾರ ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೊಮಾರ ಮಾತನಾಡಿ, ‘ನಮ್ಮ ಪಟ್ಟಣ ತಾಲ್ಲೂಕಾ ಕೇಂದ್ರವಾಗಿ ಹಲವು ವರ್ಷಗಳು ಸಂದಿವೆಯಾದರೂ ತಾಲ್ಲೂಕಿನಲ್ಲಿ ಇನ್ನೂ ಹಲವಾರು ಇಲಾಖೆಗಳು ಪ್ರಾರಂಭಗೊಂಡಿಲ್ಲ. ಸರ್ಕಾರ ಶೀಘ್ರದಲ್ಲಿಯೇ ಪ್ರಾರಂಭಿಸಬೇಕು’ ಎಂದು ಮನವಿ ಮಾಡಿದರು.

ಮುದಕಪ್ಪ ಚೌದ್ರಿ, ಬಸಪ್ಪ ಉಪ್ಪಲದಿನ್ನಿ, ಇಸ್ಮಾಯಿಲ್ ತಹಶೀಲ್ದಾರ್, ಶ್ರೀಶೈಲ ಕಂಬಿ, ಮಲ್ಲಪ್ಪ ಬಾಟಿ, ಇಕ್ಬಾಲ್ ಮುಜಾವರ, ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.