ADVERTISEMENT

‘ದಿ ಕಾಶ್ಮೀರ್ ಫೈಲ್ಸ್‌’ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 4:33 IST
Last Updated 20 ಮಾರ್ಚ್ 2022, 4:33 IST

ಹುಬ್ಬಳ್ಳಿ: ‘ದಿ ಕಾಶ್ಮೀರ ಫೈಲ್ಸ್‌ ಸಿನಿಮಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು, ಚಿತ್ರವನ್ನು ನಿಷೇಧಿಸಬೇಕು’ ಎಂದು ಹಿಂದೂ–ಮುಸ್ಲಿಂ ಗೆಳೆಯರ ಬಳಗದ ಅಶ್ಪಾಕ್‌ ಎಂ.ಕುಮಟಾಕರ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಚಿತ್ರದಿಂದ ಹಿಂದೂ–ಮುಸ್ಲಿಮರ ನಡುವೆ ದ್ವೇಷದ ಭಾವನೆ ಸೃಷ್ಟಿಯಾಗುತ್ತಿದೆ. ಅಣ್ಣ–ತಮ್ಮಂದಿರಂತೆ ಬಾಳಿ ಬದುಕುತ್ತಿದ್ದವರು ಈ ಸಿನಿಮಾದ ಪ್ರೇರಣೆಯಿಂದ ದ್ವೇಷದಲ್ಲಿ ಬದುಕುವಂತಾಗಿದೆ. ಜಾತಿ, ಧರ್ಮಕ್ಕಿಂತ ದೇಶ ಮುಖ್ಯವಾಗಿದೆ’ ಎಂದರು.

‘ಈ ಚಿತ್ರದಿಂದ ಸಾಕಷ್ಟು ಮನಸ್ಸುಗಳು ಒಡೆದು ಹೋಗಿವೆ. ಆದರೆ, ನಿರ್ಮಾಪಕರು ಮಾತ್ರ ಸಾವಿರಾರು ಕೋಟಿ ಹಣ ಗಳಿಸಿದ್ದಾರೆ. ಚಿತ್ರವನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಬಳಗದ ಮುಖಂಡರಾದ ಪ್ರವೀಣ ಕಟ್ಟಿ, ಪುಷ್ಪರಾಜಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.