ADVERTISEMENT

ಧಾರವಾಡ ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 20:31 IST
Last Updated 14 ಸೆಪ್ಟೆಂಬರ್ 2025, 20:31 IST
ಧಾರವಾಡದ ಕೃಷಿ ಮೇಳದಲ್ಲಿ ಭಾನುವಾರ ಕಂಡು ಬಂದ ಜನಸಾಗರ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಕೃಷಿ ಮೇಳದಲ್ಲಿ ಭಾನುವಾರ ಕಂಡು ಬಂದ ಜನಸಾಗರ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವ ಕೃಷಿ ಮೇಳದ ಎರಡನೇ ದಿನ ಭಾನುವಾರ 7.74 ಲಕ್ಷ ಜನರು ಭೇಟಿ ನೀಡಿದರು. ಮೊದಲ ದಿನ 3.65 ಲಕ್ಷ ಜನ ಭೇಟಿ ನೀಡಿದ್ದರು.

ವಿಶ್ವವಿದ್ಯಾಲಯದ ನಾಲ್ಕು ದಿಕ್ಕುಗಳ ಪ್ರವೇಶದ್ವಾರದಿಂದ ಜನರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಎಲ್ಲೆಡೆ ಜನಸಾಗರ ಕಂಡುಬಂತು. ಬಹುತೇಕ ರೈತರು ಕೃಷಿ ಸಂಬಂಧಿಸಿದ ಪರಿಕರಗಳನ್ನು ಖರೀದಿಸಿದರು. ಕೆಲವರು ಜಾನುವಾರುಗಳ ಪ್ರದರ್ಶನ ಮಳಿಗೆಗೆ ಭೇಟಿ ನೀಡಿ, ವಿವಿಧ ತಳಿಗಳ ಮಾಹಿತಿ ಪಡೆದರು. 

‘ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರೈತರು ಅಪಾರ ಸಂಖ್ಯೆಯಲ್ಲಿ ಮೇಳಕ್ಕೆ ಬರುತ್ತಿದ್ದಾರೆ. ನಗರ ಪ್ರದೇಶದ ನಿವಾಸಿಗಳೂ ಕುತೂಹಲದಿಂದ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ.  ಹೀಗಾಗಿ ಜನದಟ್ಟಣೆ ಹೆಚ್ಚುತ್ತಿದೆ. ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ’ ಎಂದು ಆಯೋಜಕರು ತಿಳಿಸಿದರು.

ADVERTISEMENT

ಧಾರವಾಡದ ಕೃಷಿ ಮೇಳದಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಖರೀದಿಸಿದರು

ಧಾರವಾಡ ಕೃಷಿ ಮೇಳದಲ್ಲಿನ ಜಾನುವಾರುಗಳ ಪ್ರದರ್ಶನವನ್ನು ಜನರು ವೀಕ್ಷಿಸಿದರು

ಧಾರವಾಡ ಕೃಷಿ ಮೇಳದಲ್ಲಿ ಭಾನುವಾರ ಕಂಡು ಬಂದ ಜನಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.