ADVERTISEMENT

ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 11:32 IST
Last Updated 11 ಜುಲೈ 2025, 11:32 IST
<div class="paragraphs"><p>ಆರೋಪಿ ಖ್ವಾಜಾ ಶಿರಹಟ್ಟಿ ಅಲಿಯಾಸ್‌ ಮಲ್ಲಿಕ್‌</p></div>

ಆರೋಪಿ ಖ್ವಾಜಾ ಶಿರಹಟ್ಟಿ ಅಲಿಯಾಸ್‌ ಮಲ್ಲಿಕ್‌

   

ಧಾರವಾಡ: ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕು ಚುಚ್ಚಿ ಗಾಯಗೊಳಿಸಿದ್ದ ಪ್ರಕರಣದ ಆರೋಪಿ ಖ್ವಾಜಾ ಶಿರಹಟ್ಟಿ ಅಲಿಯಾಸ್‌ ಮಲ್ಲಿಕ್‌ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ಧಾರೆ.

ಇನ್‌ಸ್ಪೆಕ್ಟರ್‌ ದಯಾನಂದ ಶೇಗುಣಿಸಿ ಅವರು ಆರೋಪಿಯ ಎಡಗಾಲಿಗೆ ಗುಂಡು ಹೊಡೆದಿದ್ಧಾರೆ. ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ADVERTISEMENT

‘ಕಂಠಿ ಗಲ್ಲಿಯಲ್ಲಿ ರಾಘವೇಂದ್ರ ಗಾಯಕವಾಡ್‌ ಎಂಬಾತನ ಬೆನ್ನು, ಕುತ್ತಿಗೆಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ವಾಜಾ ಶಿರಹಟ್ಟಿಯನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಜಟ್ಟು ಇರುವ ಸ್ಥಳ ತೋರಿಸುವುದಾಗಿ ಗಿರಿನಗರಕ್ಕೆ ಖ್ವಾಜಾ ನಮ್ಮನ್ನು ಕರೆದೊಯ್ದ. ಅಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿ, ವಶದಿಂದ ತಪ್ಪಿಸಿಕೊಳ್ಳಲು ಓಡಿದ. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರ ನೀಡಿದರೂ ಶರಣಾಗಲಿಲ್ಲ. ಆತನ ಕಾಲಿಗೆ ಗುಂಡು ಹೊಡೆದವು’ ಎಂದು ಪೊಲೀಸರು ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.