ADVERTISEMENT

ಧಾರವಾಡ: ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:10 IST
Last Updated 1 ಜನವರಿ 2026, 7:10 IST
ಶಂಕರ ಪಾಟೀಲ ಮುನೇನಕೊಪ್ಪ
ಶಂಕರ ಪಾಟೀಲ ಮುನೇನಕೊಪ್ಪ   

ಹುಬ್ಬಳ್ಳಿ: ಧಾರವಾಡದ ಪೂಜ್ಯಶ್ರೀ ಮಹಾಂತಪ್ಪ ಅರ್ಬನ್‌ ಕೋ– ಆಪರೇಟಿವ್ ಕ್ರೆಡಿಟ್‌ ಸೊಸೈಟಿಯ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಉಪಾಧ್ಯಕ್ಷರಾಗಿ ಚಂದ್ರಗೌಡ ಶಂಕರಗೌಡ ಪೊಲೀಸ್‌ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ವೇಳೆ ಮಾತನಾಡಿದ ಶಂಕರ ಪಾಟೀಲ ಮುನೇನಕೊಪ್ಪ, ‘‌ಗ್ರಾಹಕರು ಅಭಿವೃದ್ಧಿಗಾಗಿ ಸೊಸೈಟಿಯು ಆರ್ಥಿಕ ನೆರವು ನೀಡುತ್ತಾ ಬಂದಿದೆ. ಈ ಸೊಸೈಟಿಯ ಪ್ರಗತಿಗೆ ಎಲ್ಲರೂ ಸೇರಿ ಶ್ರಮವಹಿಸಿ ಕೆಲಸ ಮಾಡೋಣ’ ಎಂದು ಹೇಳಿದರು. 

ಇದೇ ವೇಳೆ ಸೊಸೈಟಿಯ 2026ರ ಹೊಸ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. 

ADVERTISEMENT

ಉಪಾಧ್ಯಕ್ಷ ಚಂದ್ರಗೌಡ ಶಂಕರಗೌಡ ಪೊಲೀಸ್‌ ಪಾಟೀಲ, ಪಿ.ಸಿ.ಹಿರೇಮಠ, ಎಸ್‌.ಜಿ.ಕರಡಿ, ಎಸ್‌.ವಿ.ಬಳ್ಳಾರಿ, ಎನ್‌.ಎಸ್‌.ಮುಗದೂರ, ಎಂ.ಬಿ.ದೊಡ್ಡಮನಿ, ಎ.ಎಂ.ಹೊಳೆಯಣ್ಣವರ, ಪಿ.ಎಂ.ಹೊನಕೇರಿ, ಎಸ್‌.ಎಫ್‌.ಅಂಗಡಿ, ಎಂ.ಜಿ.ಬಳ್ಳಾರಿ, ಶಾಖಾ ವ್ಯವಸ್ಥಾಪಕ ಶಶಿಧರ ಹಿರೇಮಠ, ವಿಶ್ವನಾಥ ಕೌದಿ, ಉದಯ ಹಿರೇಗೌಡರ ಇದ್ದರು ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.